ಮುಂಬಯಿ: ವಯಸ್ಸು ಹದಿನೇಳು. ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ. ಕನಸಿನ ನಗರ ಮುಂಬಯಿಗೆ ಬಂದಾಗ ಪಾನಿಪುರಿ ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಈತನಿಗೆ ಒಂದು ವರ್ಷದ ಗುತ್ತಿಗೆಗೆ ಕ್ರಿಕೆಟ್ ಕೊಟ್ಟಿದ್ದು ಬರೋಬ್ಬರಿ 2.40 ಕೋಟಿ ರೂ!

ಇದು ಯಶಸ್ವಿ ಜೈಸ್ವಾಲ್ ಗುಡಿಸಿಲಿನಿಂದ ಆನಂದ ಭವನಕ್ಕೆ ನಡೆದು ಹೋದ ಯಾತ್ರೆಯ ಸ್ಯಾಂಪಲ್, ಕೋಲ್ಕತ್ತದಲ್ಲಿ ಜರುಗಿದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಈ ಹುಡುಗನ ಮೇಲೆ ಭರವಸೆಯಿಟ್ಟು ಕೋಟಿ ಕೋಟಿ ಸುರಿದು ತನ್ನ ತಂಡಕ್ಕೆ ಸೇರ್ಪಡೆಗೊಳಿಸಿದೆ.

ಇವರು ಉತ್ತರಪ್ರದೇಶದ ಸಿರಿಯಾ ಗ್ರಾಮದವರು. ಅಲ್ಲಿಂದ ಮುಂಬಯಿಗೆ ಬಂದಾಗ ಅವನಿಗೆ 1 ವರ್ಷ. ವಾಸ ಟೆಂಟ್‌ನಲ್ಲಿ. ಅದು ಬಾಲಕನ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಏನಾದರೂ ಸಾಧಿಸಬೇಕು ಎಂದುಕೊಂಡ.ಇದಕ್ಕಾಗಿ ಆರಿಸಿಕೊಂಡಿದ್ದು ಕ್ರಿಕೆಟ್. ಸದ್ಯಕ್ಕೆ ಯಶಸ್ವಿ ಜೈಸ್ವಾಲ್ 19 ವರ್ಷದೊಳಗಿನ ಭಾರತ ಕ್ರಿಕೆಟ್ ತಂಡದ ಸದಸ್ಯ. ಮುಂದಿನ ವರ್ಷ ಜನೆವರಿ-ಫೆಬ್ರುವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಈ ತಂಡವು ಭಾಗವಹಿಸಲಿದೆ. ದೇಸಿ ಕ್ರಿಕೆಟ್‌ನಲ್ಲಿ ಮುಂಬಯಿ ತಂಡದ ಪರ ಆಡಿದ್ದಾನೆ.

https://twitter.com/realpreityzinta/status/1207664869585170433

LEAVE A REPLY

Please enter your comment!
Please enter your name here