Photo: Twitter

ಪುಣೆ: ಮನುಷ್ಯರ ಖಾಸಾಗಿತನಕ್ಕೆ ಈ ಕಾಲದಲ್ಲಿ ಯಾವುದೇ ಬೆಲೆ ಇಲ್ಲದಂತಾಗಿದೆ. ಯಾವುದೇ ಸಂದರ್ಭದಲ್ಲಿ ವಿಡಿಯೋ ಮಾಡಿ ವಾಟ್ಸಾಪ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ ಬಿಡಬಹುದು. ಇದೀಗ ಕೆಫೆಗೆ ಭೇಟಿ ಕೊಟ್ಟ ಮಹಿಳೆ ಅಲ್ಲಿ ಗುಪ್ತ ಕ್ಯಾಮರಾ ಇರುವುದಾಗಿ ಪತ್ತೆ ಹಚ್ಚಿದ್ದಾರೆ. ಪುಣೆಯ ಐಷಾರಾಮಿ ರೆಸ್ಟೋರೆಂಟಿಗೆ ಭೇಟಿ ನೀಡಿದ ಮಹಿಳೆಯೊಬ್ಬರಿಗೆ ವಾಷ್ ರೂಮ್ ನಲ್ಲಿ ಗುಪ್ತ ಕ್ಯಾಮರ ಇರುವುದಾಗಿ ಕಂಡುಬಂದಿದೆ. ಈ ಘಟನೆ ನವೆಂಬರ್ 3ರಂದು ಕೊನೆಯ ಪುಣೆಯ ಹಿಂಜವಾಡಿ ಪ್ರದೇಶದಲ್ಲಿರುವ ಬೀ ಹೈವ್ ಕೆಫೆಯೊಂದರಲ್ಲಿ ನಡೆದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಇದರ ಫೋಟೋವನ್ನು ಮಹಿಳೆ ಹಂಚಿಕೊಂಡಿದ್ದಾರೆ.

ನಾವು ಬೀ ಹೈವ್ ಕೆಫೆಗೆ ಭೇಟಿಕೊಟ್ಟಿದ್ದು ಅಲ್ಲಿನ ಟಾಯ್ಲೆಟ್ ಒಳಗೆ ಗುಪ್ತ ಕ್ಯಾಮೆರಾ ಇರುವುದಾಗಿ ಕಂಡುಕೊಂಡಿದ್ದೇವೆ. ಈ ಸಮಸ್ಯೆಯನ್ನು ಅಲ್ಲಿನ ನಿರ್ವಾಹಕರಿಗೆ ತಿಳಿಸಿದಾಗ ಅವರು ಹೊರಗಡೆ ಕಾಯುವಂತೆ ನಮ್ಮನ್ನು ಕೇಳಿಕೊಂಡಿದ್ದು ಬಳಿಕ ಹತ್ತೇ ನಿಮಿಷದಲ್ಲಿ ಆ ಕೆಮರಾ ಮಾಯವಾಗಿದೆ. ಕೆಫೆ ನಿರ್ವಾಹಕರಿಗೆ ದೂರು ನೀಡಿರುವುದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕೆಫೆಯ ಮ್ಯಾನೇಜರ್ ನಿಮಗೇನು ಬೇಕು ಎಂದು ನಮಗೆ ಲಂಚ ನೀಡಲು ಪ್ರಯತ್ನಿಸಿದರು ಎಂದು ಆ ಮಹಿಳೆ ದೂರಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here