ಇರಿಂಜಲಕುಡ: ಇರಿಂಜಲಕುಡ-ಅಂಬಲ್ಲೂರ್-ಎರವಕ್ಕಾಡ್ ಮಾರ್ಗದಲ್ಲಿ ಚಲಿಸುವ ‘ಖಂಡಕರ್ಣನ್’ ಬಸ್ ನಲ್ಲಿ ತಂದೆ ಮತ್ತು ಮಗಳ ನಡುವಿನ ಈ ಅಮೂಲ್ಯ ಕೌಟುಂಬಿಕ ಬಾಂಧ್ಯವವನ್ನು ಕಾಣಬಹುದು. ಪರಿಚಯಸ್ಥರು ಬಸ್ ಹತ್ತಿದಾಗಲೆಲ್ಲಾ ಚಾಲಕ ಗೋಪಕುಮಾರ್ ಅವರು ತಮ್ಮ ಮಗಳು, ಶ್ರದ್ಧಾ ಅವರನ್ನು ತಮ್ಮ ಬಸ್‌ನಲ್ಲಿ ಹೊಸ ಕಂಡಕ್ಟರ್ ಆಗಿ ಪರಿಚಯಿಸುತ್ತಾರೆ.ಪಡಿಯೂರ್ ಮೂಲದ ಗೋಪಾಕುಮಾರ್ ಈ ಬಸ್‌ನ ಮಾಲೀಕರು. ಅವರ ಮಗಳು ಕೆ.ಜಿ. ಶ್ರದ್ಧಾ ಪಿಯು ಉತ್ತೀರ್ಣರಾದ ನಂತರ ಸಿಎ ಅಂತಿಮ ಪರೀಕ್ಷೆಗೆ ತಯಾರಿ ನಡೆಸಿದ್ದರು. ಆದರೆ ಕೋವಿಡ್ -19 ಕಾರಣದಿಂದಾಗಿ ಏಕಾಏಕಿ ತನ್ನ ಪರೀಕ್ಷೆಗಳು ಮತ್ತು ಅಧ್ಯಯನಗಳು ತಾತ್ಕಾಲಿಕವಾಗಿ ಸ್ಥಗಿತ ಗೊಂಡ ಕಾರಣ ಶ್ರದ್ಧಾ ತನ್ನ ತಂದೆಯೊಂದಿಗೆ ಬಸ್ ಕಂಡಕ್ಟರ್ ಆಗಿ ಹೋಗಲು ನಿರ್ಧರಿಸಿದರು.

“ಬಸ್ ಮೂರು ತಿಂಗಳು ಕಾಲ ಶೆಡ್‌ನಲ್ಲಿತ್ತು. ನಾನು ಮೂರು ವರ್ಷಗಳ ಹಿಂದೆ ಹೊಸ ಬಸ್ ಖರೀದಿಸಿದೆ. ಸಾಲದ ಮಾಸಿಕ ಕಂತು ರೂಪದಲ್ಲಿ 30,000 ರೂ. ಸಾಲವನ್ನು ಮರುಪಾವತಿಸಲು ಬಸ್ ಸೇವೆ ಪ್ರಾರಂಭಿಸುವುದು ಅನಿವಾರ್ಯವಾಗಿತ್ತು. ಆದರೆ ಇದೀಗ ಕೆಲವೇ ಪ್ರಯಾಣಿಕರು ಇರುವುದರಿಂದ ಕೂಲಿಗೆ ಜನರನ್ನು ನೇಮಿಸಿ ಸೇವೆ ಪ್ರಾರಂಭಿಸುವುದು ಕಷ್ಟ ಸಾಧ್ಯ ಈ ಕಾರಣದಿಂದಾಗಿ ನನ್ನ ಮಗಳು ನನಗೆ ನೆರವಾದಳು”ಎಂದು ಗೋಪಕುಮಾರ್ ಹೇಳುತ್ತಾರೆ.

“ಈ ಬಸ್ ನಮ್ಮ ಏಕೈಕ ಜೀವನೋಪಾಯ. ಈ ಪರಿಸ್ಥಿತಿಯಲ್ಲಿ ಕೆಲಸಗಾರರಿಗೆ ವೇತನವನ್ನು ಕೊಡಲು ನನ್ನ ತಂದೆಗೆ ಸಾಧ್ಯವಿಲ್ಲ. ಹಾಗಾಗಿ ಬಸ್ ಕಂಡಕ್ಟರ್ ಪಾತ್ರವನ್ನು ವಹಿಸಿಕೊಳ್ಳಲು ನಿರ್ಧರಿಸಿದೆ. ಈಗ ನಾನು ಈ ಕೆಲಸದಲ್ಲಿ ಸಂಪೂರ್ಣ ಹೊಂದಾಣಿಕೆ ಮತ್ತು ಅನುಭವ ಹೊಂದಿದ್ದೇನೆ. ಆರಂಭಿಕ ದಿನಗಳಲ್ಲಿ ನಾನು ಶುಲ್ಕದ ಹಂತವನ್ನು ಕಾಗದದ ಮೇಲೆ ಬರೆದು ಪ್ರಯಾಣಿಕರಿಗೆ ಟಿಕೆಟ್ ಮಾಡುವಾಗ ಅದನ್ನು ನನ್ನ ಕೈಯಲ್ಲಿ ಇಟ್ಟುಕೊಳ್ಳುತ್ತಿದ್ದೆ. ಸೀಮಿತ ಸಂಖ್ಯೆಯ ಪ್ರಯಾಣಿಕರು ಮಾತ್ರ ಬಸ್‌ಗೆ ಹತ್ತುತ್ತಿರುವುದರಿಂದ ಟಿಕೆಟ್ ನೀಡುವುದು ಸಮಸ್ಯೆಯಲ್ಲ. ನನಗೆ ಯಾವುದೇ ಸಂದೇಹವಿದ್ದರೆ ಅದನ್ನು ನನ್ನ ತಂದೆಯೊಂದಿಗೆಕೇಳಿ ಪರಿಹರಿಸುತ್ತೇನೆ ಶ್ರದ್ಧಾ ನಗುವಿನೊಂದಿಗೆ ಹೇಳಿದರು.

Leave a Reply