image: cricket.com.au

ಕ್ರಿಕೆಟ್ ಅಂದರೆ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಅದೊಂದು ರೀತಿಯ ಥ್ರಿಲ್ ಆಟ. ಕೊನೆಯ ಎಸತದವರೆಗೂ ಕ್ರಿಕೆಟ್ ನಲ್ಲಿ ರೋಮಾಂಚನ ಇರುತ್ತದೆ.  ಲಂಕಾ ಎಸೆತಗಾರ ಸಂದಕನ್ ಅವರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿಶೇಷವೇನೆಂದರೆ ಲಂಕಾ ಬೌಲರ್ ಎದುರಾಳಿ ತಂಡದ ಬಲಿಷ್ಠ ಬ್ಯಾಟ್ಸಮನ್ ಸ್ಮಿತ್ ರನ್ನು ಸುಲಭವಾಗಿ ರನ್ ಔಟ್ ಮಾಡುವ ಅವಕಾಶವನ್ನು ಕೈಯಾರೆ ಕಳೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ-20 ಪಂದ್ಯದಲ್ಲಿ ಶ್ರೀಲಂಕಾ 9 ವಿಕೆಟ್ ಗಳಿಂದ ಸೋಲನ್ನು ಕಂಡಿದೆ. ಇದೇ ಪಂದ್ಯದಲ್ಲಿ ಸ್ಪಿನ್ನರ್ ಲಕ್ಷ್ಮಣ್ ಸಂದಕನ್ ರವರಿಗೆ ನಾನ್ ಸ್ಟ್ರೈಕ್ ನಲ್ಲಿ ಇದ್ದ ಸ್ಮಿತ್ ರನ್ನು ಸುಲಭವಾಗಿ ರನೌಟ್ ಮಾಡಬಹುದಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಡೇವಿಡ್ ವಾರ್ನರ್ ಎಸೆತವನ್ನು ನೇರವಾಗಿ ಬಾರಿಸಿದಾಗ ಆ ವೇಳೆ ಚೆಂಡು ವಿಕೆಟಿಗೆ ಬೀಳುತ್ತದೆ. ಆದರೆ ಅದು ಬೌಲರ್ ಕೈಗೆ ಟಚ್ ಆಗಿರುವುದಿಲ್ಲ. ಈ ಸಂದರ್ಭದಲ್ಲಿ ಸ್ಮಿತ್ ರನ್ ಪಡೆಯಲು ಓಡಿದ್ದರೂ, ಎಡಗೈಯಲ್ಲಿ ವಿಕೆಟ್ ಕಿತ್ತು ಸಂಭ್ರಮಿಸಿದ ಕಾರಣ ರನೌಟ್ ನಿಂದ ಸ್ಮಿತ್ ಪಾರಾಗಿದ್ದಾರೆ. ವಿಡಿಯೋ ನೋಡಿ

LEAVE A REPLY

Please enter your comment!
Please enter your name here