ಈ ಫೋಟೋ ನೀವು ನೋಡಿರಬಹುದು. ಹೆಲ್ಮೆಟ್ ಧರಿಸದೆ ಹಲವು ಮಂದಿಯನ್ನು ಬೈಕ್ ನಲ್ಲಿ ಕರೆದೊಯ್ಯುವ ವ್ಯಕ್ತಿಗೆ ಪೊಲೀಸ್ ಕೈ ಮುಗಿಯುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿತ್ತು.

ಮಡಕಸಿರ ಸರ್ಕಲ್ ಇನ್ಸ್ಪೆಕ್ಟರ್ ಬಿ ಶುಭ ಕುಮಾರ್ ಅವರು ಸುಮಾರು 10 ಗಂಟೆಗೆ ಕರ್ತವ್ಯಕ್ಕೆ ಹೋಗುತ್ತಿದ್ದಾಗ ಬೈಕು ಸವಾರಿ ಮಾಡುತ್ತಿರುವ ಕೆ ಹನುಮಾಂತಾರಾಯುಡು ರನ್ನು ಕಂಡರು. ಅವರ ತಮ್ಮಿಬ್ಬರು ಪುತ್ರರನ್ನು ನೈಕ್ ಪೆಟ್ರೋಲ್ ಟ್ಯಾಂಕ್ ನಲ್ಲಿ ಕೂರಿಸಿದ್ದರು. ಅವರ ಹೆಂಡತಿ ಹಿಂದೆ ಕುಳಿತುಕೊಂಡಿದ್ದಳು. ಮಹಿಳೆಯ ಸಂಬಂಧಿ ಅವಳ ಹಿಂದೆ ಕೂತಿದ್ದರು.

“ನಾವು ಟ್ರಾಫಿಕ್ ನಿಯಮ ಬಗ್ಗೆ ಎಷ್ಟೆಲ್ಲಾ ಜಾಗೃತಿ, ಅರಿವು ಮೂಡಿಸಲು ಶ್ರಮಿಸುತ್ತಿದ್ದೇವೆ. ಆದರೆ ಇನ್ನೂ ಜನರು ಅದನ್ನು ಪರಿಗಣಿಸುವುದಿಲ್ಲ. ನಾನು ನಿರಾಶೆಗೊಂಡು ಅವನಿಗೆ ಜೋರು ಮಾಡದೆ ಕೈ ಮುಗಿದು ಬಿಟ್ಟೆ. ಸಾರ್ವಜನಿಕರಿಗೆ ಕಿರುಕುಳ ನೀಡುವಂತೆ ಈಗಾಗಲೇ ಪೊಲೀಸರ ಚಿತ್ರಣ ಇದೆ. ಮಕ್ಕಳ ಮನಸ್ಸಿನಲ್ಲಿ ಪೊಲೀಸ್ ದುಷ್ಟ ಎಂದು ಬಿಂಬಿಸಲು ನಾನು ಬಯಸಲಿಲ್ಲ “ಎಂದು ಶುಭ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದರು.

ಹನುಮಂತಾರಾಯುಡು ಪದೇ ಪದೇ ಸಿಕ್ಕಿಬಿದ್ದಿದ್ದು ಮುಂಚಿತವಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು.

ಶುಭ ಕುಮಾರ್ ಅವರು, ಬೈಕ್ ಸವಾರನಲ್ಲಿ ಲೈಸೆನ್ಸ್ ಇಲ್ಲದಿದ್ದರೂ ಕದಂಡ ವಿಧಿಸದೆ ಕುಟುಂಬದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದರು.

Leave a Reply