ಸಾಂದರ್ಭಿಕ ಚಿತ್ರ

ದೆಹಲಿ: ದಾರಿಯಲ್ಲಿ ಪರಿಚಯವಾದ ಓರ್ವ ಯುವಕ ನನ್ನನ್ನು ಅತ್ಯಾಚಾರಗೈದಿದ್ದಾನೆ ಎಂದು ಹದಿನಾರರ ಹರೆಯದ ಯುವತಿಯೋರ್ವಳು ದೂರು ನೀಡಿದ್ದಾಳೆ. ಉತ್ತರ ದೆಹಲಿಯ ಈ ಯುವತಿ ಅಕ್ಟೋಬರ್ ಮೊದಲ ವಾರದಲ್ಲಿ ಗರುಗ್ರಾಮದಲ್ಲಿ ಅತ್ಯಾಚಾರಕ್ಕೀಡಾಗಿದ್ದಳು.

ಅಂಕಿತ್ ಎಂಬ ಯುವಕ ದಾರಿ ಮಧ್ಯೆ ಪರಿಚಿತನಾದನು. ಬಳಿಕ ಹೋಟೆಲೊಂದಕ್ಕೆ ನನ್ನನ್ನು ಕರೆದುಕೊಂಡು ಹೋಗಿ ಕುಡಿಯಲು ನೀಡಿದ ನೀರಿನಲ್ಲಿ ಮತ್ತು ಅಮಲು ಬರುವ ಔಷಧಿ ಬೆರೆಸಿದ್ದ. ಬಳಿಕ ಅಲ್ಲಿ ನನ್ನನ್ನು ಹಲವು ಬಾರಿ ಅತ್ಯಾಚಾರಗೈದನೆಂದು ದೂರಿನಲ್ಲಿ ಹೇಳಲಾಗಿದೆ. ಈ ಕುರಿತು ಯಾರೊಂದಿಗಾದರೂ ಹೇಳಿದರೆ ಕೊಂದು ಹಾಕುವೆನೆಂಬ ಬೆದರಿಕೆಯನ್ನೂ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಆ ದಿನದ ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳೇನೂ ನನಗೆ ತಿಳಿದಿಲ್ಲವೆಂದೂ ಯುವತಿ ತಿಳಿಸಿದ್ದಾಳೆ.

Leave a Reply