ಮಾಸ್ಟರರ ರಾಷ್ಟ್ರ ದ್ವಜದಲ್ಲಿ ಎಷ್ಟು ಬಣ್ಣವಿದೆ ಎಂಬ ಪ್ರಶ್ನೆಗೆ ಮಕ್ಕಳೆಲ್ಲಾ ಒಕ್ಕೊರಲಿನಿಂದ ಬೊಬ್ಬೆ ಹಾಕಿದರು ಮೂರು,ಮೂರು,ಮೂರು…
ಬೊಬ್ಬೆಯ ಬಳಿಕ ಐದು ಎಂದು ಕ್ಷೀಣದ್ವನಿಯಲ್ಲಿ ಹುಡುಗನೊಬ್ಬ ಎದ್ದು ನಿಂತು ಹೇಳಿದ… ಮತ್ತೆ ಮಕ್ಕಳ ಬೊಬ್ಬೆ ನಗು…ಮಾಸ್ಟರರಿಗೆ ಒಂದಿಷ್ಟು ಕೋಪ….ಐದು ಯಾವ ಯಾವ ಬಣ್ಣ ತಿಳಿಸು ಎಂದು ಹುಡುಗನ ನಿಲ್ಲಿಸಿದರು…ಹುಡುಗ ವಿನಮ್ರತೆಯಿಂದ ಸರ್… ಕೇಸರಿ ಬಿಳಿ ಮತ್ತು ಹಸಿರು.ನಾಲ್ಕನೆಯದ್ದು ಅಶೋಕ ಚಕ್ರದ ನೀಲಿ‌ಬಣ್ಣ ಎಂದು ತಡವರಿಸಿದ…

ಮಕ್ಕಳ ಮತ್ತೆ ಬೊಬ್ಬೆ ನಗು….ಸರಿ ಹಾಗಾದರೆ ಐದನೆಯ ಬಣ್ಣ ಯಾವುದು ?ಹುಡುಗ ಕ್ಷೀಣ ದ್ವನಿಯಲ್ಲಿ‌ ಕೆಂಪು ಬಣ್ಣ ಎಂದು ಹೇಳುತ್ತಿದ್ದಂತೆ
ಕಣ್ಣಾಲಿಗಳು ಒದ್ದೆಯಾಯಿತು….ಮತ್ತೆ ಮಕ್ಕಳ ನಗು …ಕೆಂಪು ಎಲ್ಲಿಂದ ಬಂತು ಮಾರಾಯಾ ? ಎಂದು ಮಾಸ್ಟರ್ ಕೇಳಿದರು…

Image credit : Needpix.com

ಸರ್ ನನ್ನ ತಂದೆ ಪುಲ್ವಾಮದಲ್ಲಿ ತೀರಿ ಹೋದಾಗ ಅವರ ಮೈಮೇಲೆ ಸುತ್ತಿದ ದ್ವಜದಲ್ಲಿ ಕೆಂಪು ಬಣ್ಣವೂ ಇತ್ತು ಎಂದು ಜೋರಾಗಿ ಅತ್ತ…ಸ್ಕೂಲ್ ಸ್ಥಬ್ದವಾಯಿತು….ನೀರವ ಮೌನ…ಮಾಸ್ಟರು ಆತನ ಅಪ್ಪಿಹಿಡಿದರು.ಅವರ ಕಣ್ಣಿಂದ ಹರಿದ ಒಂದೆರಡು ಹನಿ ಹುಡುಗನ ಹೆಗಲ‌ಮೇಲೆ ಬಿದ್ದು ದೇಶದ ಭೂಮಿಯಲ್ಲಿ ವಿಲೀನವಾಯಿತು…

ಜಲೀಲ್ ಮುಕ್ರಿ

LEAVE A REPLY

Please enter your comment!
Please enter your name here