ಬೆಂಗಳೂರು: ತಮ್ಮ ಮಕ್ಕಳು ಕಲಿತು ದೊಡ್ಡವರಾಗಬೇಕು. ಸಮಾಜದಲ್ಲಿ ಅವರು ತಮ್ಮ ಕಾಲ ಮೇಲೆ ನಿಂತುಕೊಳ್ಳಬೇಕು ಎಂಬುದು ಎಲ್ಲಾ ಹೆತ್ತವರ ಹೆಬ್ಬಯಕೆ. ಅದಕ್ಕಾಗಿ ಅವರು ಅವರು ಮಕ್ಕಳಿಗೆ ಶಾಲೆಗೆ ಹೋಗುವಂತೆ ಮತ್ತು ಚೆನ್ನಾಗಿ ಕಲಿಯುವಂತೆ ದಿನನಿತ್ಯ ಬುದ್ಧಿವಾದ ಹೇಳುತ್ತಾ ಇರುತ್ತಾರೆ. ಕೆಲವೊಮ್ಮೆ ಈ ಬುದ್ದಿವಾದ ಮಕ್ಕಳ ಮೇಲೆ ತೀವ್ರ ಒತ್ತಡ ತರುವ ಸಾಧ್ಯತೆಯೂ ಇರುತ್ತದೆ. ಬೆಂಗಳೂರಿನಲ್ಲಿ 13 ವರ್ಷದ ಬಾಲಕ ಹೆತ್ತವರು ಶಾಲೆಗೆ ಹೋಗಬೇಕು ಎಂದು ಹೇಳಿದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಂತಹ ಘಟನೆ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ರಾಹುಲ್ ಎಂಬ ಬಾಲಕ ತನ್ನ ಮನೆ ಸಮೀಪದ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದು ಶಾಲೆಗೆ ಹೋಗಲು ನಿರಾಕರಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಆತನ ಹೆತ್ತವರು ಬಹಳ ಬಾರಿ ತಕರಾರು ಮಾಡುತ್ತಿದ್ದರು. ಸಾಕಷ್ಟು ಬಾರಿ ಬುದ್ಧಿ ಹೇಳಿ ಬಲವಂತವಾಗಿ ಶಾಲೆಗೆ ಕಳುಹಿಸುತ್ತಿದ್ದರು. ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗುವ ಮೊದಲು ತಾಯಿ ಮಗ ರಾಹುಲ್ ನಿಗೆ ಉಪಹಾರ ಸೇವಿಸಿ ಶಾಲೆಗೆ ಹೋಗುವಂತೆ ಸೂಚಿಸಿದ್ದರು.

ತಂದೆ ಕೂಡ ಆತನಿಗೆ ಎಚ್ಚರಿಕೆ ನೀಡಿದ್ದರು. ಅಪಹರಣ 12 ಗಂಟೆ ಸುಮಾರಿಗೆ ತಂದೆ ಮನೆಯ ಮೊಬೈಲ್ ಗೆ ಕರೆ ಮಾಡಿದ್ದು, ರಾಹುಲ್ ಕರೆ ಸ್ವೀಕರಿಸಿಲ್ಲ. ಮಗ ಶಾಲೆಗೆ ಹೋಗಿದ್ದನೋ ಇಲ್ಲವೋ ನೋಡಲಿಕ್ಕೆ ತಂದೆ ಹತ್ತಿರದ ಮನೆಯವರನ್ನು ಮನೆಗೆ ಕಳುಹಿಸಿದ್ದರು. ಆದರೆ ನೋಡುವಾಗ ಮನೆ ಒಳಗಿನಿಂದ ಚಿಲಕ ಹಾಕಿತ್ತು. ಬಾಗಿಲು ಒಡೆದು ಹೋಗಿ ನೋಡಿದಾಗ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಇದೀಗ ಮಗನನ್ನು ಕಳಕೊಂಡ ಹೆತ್ತವರ ನೋವು ಹೇಳತೀರದು. ರಾಹುಲ್ ನ ತಂದೆ ಕಾರು ಚಾಲಕನಾಗಿದ್ದು, ತಾಯಿ ಸ್ಥಳೀಯ ಗಾರ್ಮೆಂಟ್ ನಲ್ಲಿ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here