ಪಲ್ವಾನ್(ಹರ್ಯಾಣ): ಹರ್ಯಾಣದ ಪಲ್ವಾನ ಗ್ರಾಮದ ರಾಯದಾಸಕ ಎಂಬಲ್ಲಿನ ಪ್ರೌಢ ಶಾಲೆಯಲ್ಲಿ ಶಿಥಿಲವಾದ ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳು ಹೆದರಿಕೆಯಿಂದ ಕಲಿಯುತ್ತಿದ್ದಾರೆ. ಕೊಣೆಯು ಬೀಳುವ ಸ್ಥಿತಿಗೆ ತಲುಪಿದನ್ನು ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಮುಖ್ಯೋಪಾಧ್ಯಾಯರು ಹೇಳುತ್ತಾರೆ. ಶಾಲೆಯ ದುಃಸ್ಥಿತಿಯ ಕುರಿತು ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದರೂ ಆಧಿಕಾರಿಗಳು ಅದನ್ನು ನಿರಾಕರಿಸಿದ್ದಾರೆ. ಈ ಶಾಲೆಯ ಈ ಸ್ಥಿತಿಯ ಕುರಿತು ತಮಗೆ ಈವರೆಗೂ ಯಾವ ದೂರು ಬಂದಿಲ್ಲ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಮಕ್ಕಳ ಭವಿಷ್ಯದೊಂದಿಗೆ ಈ ರೀತಿಯಾಗಲು ಬಿಡುವುದಿಲ್ಲ. ಕೊಠಡಿಯ ದುರಸ್ತಿ ಕಾರ್ಯ ಬೇಗನೆ ನಡೆಸಲಾಗುವುದು ಎಂದು ಅವರು ಹೇಳೀದರು.

ಶಾಲೆಯ ಗೋಡೆಗಳು ಬೀಳುವ ಸ್ಥಿತಿಯಲ್ಲಿದ್ದು, ಮಾಡಿನಿಂದ ಮಳೆ ನೀರು ಒಳಗೆ ಬೀಳುತ್ತಿದೆ. ಅಡ್ಡಪಕ್ಕಾಸುಗಳು ಮುರಿದಿವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಕೂತುಕೊಳ್ಳಲು ಸರಿಯಾದ ಬೆಂಚುಗಳಿಲ್ಲ. ಕೋಣೆಯಲ್ಲಿ ಕುಳಿತುಕೊಳ್ಳು ಹೆದರಿಕೆಯಾಗುತ್ತಿದೆ. ಗೋಡೆಗಳು ಮೈಮೇಲೆ ಬೀಳುವುದೊ ಎಂದು ಹೆದರಿಕೆಯಾಗುತ್ತಿದೆ ಎಂದು ಮಕ್ಕಳು ಹೆದರುತ್ತಾ ಹೇಳಿದರು. ಈರೀತಿ ಮಧ್ಯಪ್ರದೇಶ ಸರಕಾರದ ಮೌಲ್ಯಾಧ್ಯಾರಿತ ಶಿಕ್ಷಣ ಎಂಬ ಘೋಷಣೆ ಸುಳ್ಳಾಗಿದೆ. ಶಾಲೆಯ ಮುಖ್ಯೋಪಾಧ್ಯಾಯ ತೇಜ್‍ಬೀರ್ ಸಿಂಗ್ ಕೂಡ ಮಕ್ಕಳ ದುಃಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಕೋಣೆಯು ಮುಗ್ಗರಿಸುವ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಹೇಳಿದರು.

ಜಿಲ್ಲಾ ಶಿಕ್ಷಣಾಧಿಕಾರಿ ಸುಮನ್ ಜೈನ್‍ರನ್ನು ಸಂಪರ್ಕಿಸಿದಾಗ ಮೌಲ್ಯಾಧಾರಿತ ಶಿಕ್ಷಣ ಅಧಿಕಾರಿಗೆ ಇಂದು ರಜೆಯಿದೆ. ಅವರ ಅಧಿಕಾರ ವ್ಯಾಪ್ತಿಗೆ ಈಶಾಲೆ ಒಳಪಟ್ಟಿದ್ದು, ಈ ಬಗ್ಗೆ ವಿಚಾರಿಸಿದಾಗ ಯಾವುದೇ ದೂರು ಈ ಶಾಲೆಯ ಬಗ್ಗೆ ಬಂದಿಲ್ಲ ಎಂದು ತಿಳಿಸಿದ್ದಾರೆ ಎಂದಿದ್ದಾರೆ. ಮಕ್ಕಳ ಭವಿಷ್ಯದೊಂದಿಗೆ ಆಟವಾಡಲು ಬಿಡುವುದಿಲ್ಲ ಆದ್ದರಿಂದ ಸಮಸ್ಯೆ ಪರಿಹಾರಕ್ಕೆ ಆದೇಶ ನೀಡಿದ್ದೇನೆ. ಮಾತ್ರವಲ್ಲ ಎಷ್ಟು ಇಂತಹ ಶಾಲೆಗಳಿವೆ ಎಂದು ಪತ್ತೆ ಹಚ್ಚಿ ಅವುಗಳ ದುರಸ್ತಿ ಕಾರ್ಯವನ್ನು ಮಾಡಲಾಗುವುದು ಎಂದು ಹೇಳಿದರು.

Leave a Reply