ತವಾಂಗ್: ಅರುಣಾಚಲ ಪ್ರದೇಶದ ತವಾಂಗ್ ನಗರದಲ್ಲಿನ ವಿದ್ಯಾರ್ಥಿಗಳ ಸಾಧನೆಯು ನಿಜಕ್ಕೂ ಶ್ಲಾಘನೀಯವಾಗಿದೆ. ಇಂತಹ ಯುವ ತಲೆಮಾರು ದೇಶಕ್ಕೆ ಸಮಾಜಕ್ಕೆ ತುಂಬಾ ಆತ್ಮವಿಶ್ವಾಸ, ಭರವಸೆಯನ್ನು ಮೂಡಿಸುತ್ತಾರೆ. ಅಲ್ಲಿನ ಕೆಲವು ವಿದ್ಯಾರ್ಥಿಗಳು ಜಂಟಿಯಾಗಿ ದೊಡ್ಡ ಕಮ್ಯುನಿಟಿ ಗ್ರಂಥಾಲಯವನ್ನು ನಿರ್ಮಿಸಿ ಸ್ಥಳೀಯ ಜನರಿಗೆ ಪುಸ್ತಕಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ವಿಶೇಷವೆಂದರೆ ವಿದ್ಯಾರ್ಥಿಗಳು ಈ ಕಮ್ಯುನಿಟಿ ಲೈಬ್ರೇರಿಯನ್ನು ತಮ್ಮ ಕೈಗಳಿಂದಲೇ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಅವರು ಸ್ವತಃ ಮೇಸ್ತ್ರಿ ಮತ್ತು ಬಡಗಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅರುಣಾಚಲ ರಾಜ್ಯ ಮುಖ್ಯಮಂತ್ರಿ ಪೆಮಾ ಖಂಡು ಈ ಕಮ್ಯುನಿಟಿ ಗ್ರಂಥಾಲಯದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು ವಿದ್ಯಾರ್ಥಿಗಳ ಶ್ರಮ ಮತ್ತು ಇಚ್ಚಾಶಕ್ತಿಯನ್ನು ಕೊಂಡಾಡಿದ್ದಾರೆ. , “ತವಾಂಗ್ ವಿದ್ಯಾರ್ಥಿಗಳು ಜಂಟಿಯಾಗಿ ಈ ಸುಂದರ ಸಮುದಾಯ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ. ಅಡಿಪಾಯ, ಶಟ್ಟರಿಂಗ್, ಮರಗೆಲಸ, ಕಲ್ಲು, ಚಾವಣಿ ಇತ್ಯಾದಿಗಳ ಸಂಪೂರ್ಣ ನಿರ್ಮಾಣ ಕಾರ್ಯಗಳನ್ನು ವಿದ್ಯಾರ್ಥಿಗಳೇ ಮಾಡಿದ್ದಾರೆ ಎಂದು ಬರೆದಿದ್ದಾರೆ.

ಈ ಕಮ್ಯುನಿಟಿ ಗ್ರಂಥಾಲಯವನ್ನು ಸಿದ್ಧಪಡಿಸುವ ಮೂಲಕ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದು, ಆಯುಧಕ್ಕಿಂತ ಲೇಖನಿಯು ತುಂಬಾ ಶಕ್ತಿಶಾಲಿಯಾಗಿದೆ ಎಂಬ ನಾಣ್ಣುಡಿಯನ್ನು ಪಸರಿಸಿದ್ದಾರೆ.

Leave a Reply