ಚಿತ್ರ ಕೃಪೆ: Tv5 ಕನ್ನಡ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ‌ ಪೂಜೆಗೆ ಬಂದ ಬಹುಭಾಷಾ ನಟಿ ಅನುಷ್ಕಾ ಹಾಗೂ ಸಹನಟ ಫರ್ವೇಝ್ ಎಂಬವರ ಮೇಲೆ ಸುಬ್ರಹ್ಮಣ್ಯ ಪೋಲಿಸ್ ಠಾಣೆಯ‌ಯಲ್ಲಿ‌ ಕೂಡಿ ಹಾಕಿ ಮನಬಂದಂತೆ ಥಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅನುಷ್ಕಾ ಹೇಳಿರುವ ವಿಡಿಯೋ ಹಾಗು ನಟ‌‌ ಪರ್ವೇಝ್ ಆಡಿಯೋ ತುಣುಕು ಇದೀಗ ವ್ಯಾಪಕ ವೈರಲ್ ಆಗಿದೆ.

ಘಟನೆಯ ವಿವರ

ಕಳೆದ ‌ಕೆಲ ದಿನಗಳ ಹಿಂದೆ ನಟಿ ಅನುಷ್ಕಾ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪೂಜೆಗೆಂದು ಬಂದಿದ್ದರು ನಾಗ ದೋಷ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಹೆಚ್ಚಿನ ಹಣವನ್ನು ನೀಡಬೇಕಾದ ಕಾರಣ ಅವರ ಕೈಯಲ್ಲಿ ಹಣ ಕೊರತೆ ಉಂಟಾಗಿದ್ದು, ಅವರ ಜೊತೆ‌ ಸಿನಿಮಾದಲ್ಲಿ‌ ಸಹನಟನಾಗಿ ನಟಿಸುತ್ತಿರುವ ಪುತ್ತೂರು ಬೆಳ್ಳಾರೆ ಮೂಲದ ಫರ್ವೇಝ್‌ಗೆ ಕರೆ ಮಾಡಿ ಹಣದ ಸಹಾಯ‌ ಕೋರಿದ್ದರು. ಅನುಷ್ಕಾರ‌ ಮನವಿಯಂತೆ‌ ಫರ್ವೇಝ್ ಹಣವನ್ನು ತಂದುಕೊಟ್ಟರು. ಅನುಷ್ಕಾ ಹಾಗು ಫರ್ವೇಝ್‌ನನ್ನು ಗಮನಿಸಿದ ಸುಬ್ರಹ್ಮಣ್ಯ ಪೋಲಿಸರು ಏನು, ಎತ್ತ ಎಂದು ಪ್ರಶ್ನಿಸಿ, ಭಿನ್ನ‌ ಕೋಮಿನವರೆಂದು ಅರಿತು ಇಬ್ಬರಿಗೂ ಕಾನೂನು‌ ಮೀರಿ ಮನಬಂದಂತೆ ನಿಂದಿಸಿ ಹಲ್ಲೆ‌ ನಡೆಸಿದ್ದಾರೆ ಎಂದು ಇಬ್ಬರು ಹೇಳಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ Tv5 ಚಾನಲ್ ನಿರೂಪಕಿಯೊಬ್ಬರು ಫರ್ವೇಝ್‌ರನ್ನು ಸಂಪರ್ಕಿಸಿದಾಗ ಸುಬ್ರಹ್ಮಣ್ಯ ಪೋಲಿಸರು ನಡೆಸಿದ ಅನೈತಿಕ ಪೋಲಿಸ್‌ಗಿರಿ ಬಗ್ಗೆ ತಿಳಿದುಬಂದಿದೆ. ಸಹನಟ ಫರ್ವೆಝ್‌ಗೆ ಕರೆಂಟ್ ಶಾಕ್‌ ಕೊಟ್ಟು, ಒಂದು ಬಾರಿ ಆಪರೇಷನ್ ಆಗಿದ್ದ ದೇಹದ ಭಾಗಕ್ಕೆ ತುಳಿದು ಹಲ್ಲೆ‌ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದರಲ್ಲಿ ಲೇಡಿ ಕಾನ್ಸ್‌ಟೇಬಲ್ ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ.

ಇನ್ನೊಂದು ಕಡೆಯಲ್ಲಿ ಬೆಂಗಳೂರಿನ A2Z ನ್ಯೂಸ್ ಚಾನೇಲ್ ನಿರೂಪಕ ಸಲ್ಮಾನ್ ಆಶೀಕ್ ಸುಬ್ರಹ್ಮಣ್ಯ ಎಸ್ಪಿ ಚಂದಪ್ಪ ಅವರನ್ನು ನೇರಾ ಸಂಪರ್ಕದಲ್ಲಿ ಮಾತಾಡಿಸಿದ ಎಂದು ಹೇಳಲಾದ ಆಡಿಯೋ ವೈರಲ್ ಆಗಿದೆ. ಅವರು ನಿರೂಪಕ ಚಂದಪ್ಪರ‌ ಬಳಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದರು.‌ ನಿರೂಪಕ ಕೇಳಿದ ಪ್ರಶ್ನೆಗಳಿಗೆ ಚಂದಪ್ಪ ಅವರು ಉತ್ತರಿಸಲು ಚಡಪಡಿಸುತ್ತಿರುವುದು ಕಂಡು ಬರುತ್ತದೆ.

 

Leave a Reply