ನವದೆಹಲಿ: ಸರ್ವೊಚ್ಚ ನ್ಯಾಯಾಲಯದ ತೀರ್ಪು ನಮ್ಮ ನಿರೀಕ್ಷೆಯಂತೆ ಇರಲಿಲ್ಲ. ಆದರೆ ಜನತೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ಝಫ್ರಾಯ್ಬ್ ಜಿಲಾನಿ ತಿಳಿಸಿದ್ದಾರೆ. ಈ ತೀರ್ಪಿನ ಬಗ್ಗೆ ಬಾಬರಿ ಆ್ಯಕ್ಷನ್ ಕಮಿಟಿ ಸಭೆ ನಡೆಸಿದ ನಂತರವಷ್ಟೇ ತೀರ್ಪಿನ ಪರಿಶೀಲನೆ ನಡೆಸಿ ಮುಂದಿನ ತೀರ್ಮಾನದ ಬಗ್ಗೆ ಚಿಂತಿಸಲಾಗುವುದೆಂದು ತಿಳಿಸಿದ್ದಾರೆ.

ಇಡೀ ಮುಸ್ಲಿಮ್ ಸಮುದಾಯದಲ್ಲಿ ಪ್ರತಿಭಟನೆಯಾಗಲಿ ಅಥವಾ ಯಾವುದೇ ಸಭೆ ನಡೆಸದಂತೆ ಮುಸ್ಲಿಮ್ ಪರ್ಸನಲ್ ಬೋರ್ಡ್ ವಿನಂತಿಸಿದೆ. ಮಸೀದಿಯ ಬದಲಿಗೆ ಯಾವುದೇ ಪರ್ಯಾಯ ಜಾಗದ ಅಗತ್ಯ ನಮಗಿರಲಿಲ್ಲ. ನಾವು ಈ ತೀರ್ಪಿನ ಮರು ಪರಿಶೀಲನೆಯ ಬಗ್ಗೆ ಈಗ ತೀರ್ಮಾನ ನಡೆಸಿಲ್ಲ. ಸಭೆಯ ನಂತರ ಹೆಚ್ಚಿನ ಮಾಹಿತಿ ನೀಡುತ್ತೇವೆಂದು ಹೇಳಿದ್ದಾರೆ.

ಈ ತೀರ್ಪಿನಿಂದ ನಮ್ಮ ಹಕ್ಕು ಚ್ಯುತಿಯಾಗಿದೆ. ಈ ತೀರ್ಪಿನಲ್ಲಿ ಯಾವುದೇ ಪ್ರಭಾವವಿದೆಯೆಂದು ಖಂಡಿತ ಹೇಳುವುದಿಲ್ಲ. ನಾವು ತೀರ್ಪನ್ನು ಗೌರವಿಸುತ್ತೇವೆ. ಆದರೆ ನಮ್ಮ ನಿರೀಕ್ಷೆಯಂತೆ ಈ ತೀರ್ಪು ಬಂದಿಲ್ಲ, ಆದ್ದರಿಂದ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here