ನವದೆಹಲಿ: ಎಲ್ಲಾ ಪ್ರಕರಣಗಳಲ್ಲಿ ಸುಪ್ರೀಮ್ ಕೋರ್ಟು ಹಸ್ತಕ್ಷೇಪ ನಡೆಸಬಾರದೆಂದು ಕೇಂದ್ರ ಹೇಳಿದೆ. ನಕ್ಸಲ್ ಸಂಪರ್ಕದ ಆರೋಪದಲ್ಲಿ ತೆಲುಗು ಕವಿ ವರವಿರ ರಾವ್ ಸಹಿತ ಮಾನವ ಹಕ್ಕು ಕಾರ್ಯಕರ್ತರ ಬಂಧನದ ವಿರುದ್ಧ ಸುಪ್ರೀಮ್ ಕೋರ್ಟು ಮಧ್ಯೆ ಪ್ರವೇಶಿಸಿರುವುದನ್ನು ಆಕ್ಷೇಪಿಸಿ ಕೇಂದ್ರ ಸರಕಾರ ಈ ಹೇಳಿಕೆ ನೀಡಿದೆ.

ಎಲ್ಲಾ ಪ್ರಕರಣಗಳು ಸುಪ್ರೀಮ್ ಕೋರ್ಟಿನ ಮೆಟ್ಟಲೇರದು, ಆದರೆ ಮಾನವ ಹಕ್ಕು ಕಾರ್ಯಕರ್ತರ ಬಂಧನದ ವಿಚಾರದಲ್ಲಿ ಸುಪ್ರೀಮ್ ಕೋರ್ಟು ಮಧ್ಯ ಪ್ರವೇಶಿಸಿದ್ದು ಅಪಾಯಕಾರಿಯಾಗಿದೆ. ಇದು ತಪ್ಪು ಹಾದಿಗೆ ಸೆಳೆಯುವಂತಹದ್ದು. ಅನೇಕ ಪ್ರಕರಣಗಳು ಸುಪ್ರೀಮ್ ಕೋರ್ಟಿನ ಮೆಟ್ಟಲೇರುವ ಸಾಧ್ಯತೆಯಿದೆಯೆಂದೂ ಹೇಳಿದೆ.

Leave a Reply