ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿಯ ಬಂಧನದ ನಂತರ ಬಾಲಿವುಡ್‌ನಲ್ಲಿ ಡ್ರಗ್ಸ್ ಬಳಸುವವರ ಪಟ್ಟಿಯಲ್ಲಿ ದೊಡ್ಡ ದೊಡ್ಡ ಗಣ್ಯರ ಹೆಸರುಗಳು ಕೇಳಿ ಬರಲಾರಂಭಿಸಿವೆ. ರಿಯಾ ಈಗಾಗಲೇ ನಟಿ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಮತ್ತು ಡಿಸೈನರ್ ಸೈಮನ್ ಖಂಬಾಟಾ ಅವರಂತಹ ದೊಡ್ಡ ಹೆಸರುಗಳನ್ನು ಬಹಿರಂಗ ಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಸುಶಾಂತ್ ತನ್ನ ಲೋನಾವಾಲಾ ತೋಟದ ಮನೆಯಲ್ಲಿ ಡ್ರಗ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು ಎಂದು ರಿಯಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಎನ್‌ಎನ್-ನ್ಯೂಸ್ 18 ರ ವರದಿಯ ಪ್ರಕಾರ, ಎನ್‌ಡಿಪಿಎಸ್ ಕಾಯ್ದೆ ಸೆಕ್ಷನ್ 67 ರ ಅಡಿಯಲ್ಲಿ ಮಾಡಿದ ಹೇಳಿಕೆಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ತೋಟದಮನೆ ಅವರ ಬಾಲಿವುಡ್ ಸೆಲೆಬ್ರಿಟಿ ಸ್ನೇಹಿತರುಗಳ ಜೊತೆ ಗೂಡಿ ಡ್ರಗ್ ಪಾರ್ಟಿಗಳನ್ನು ಮಾಡುತ್ತಿದ್ದಾರೆಂದು ರಿಯಾ ಹೇಳಿದ್ದಾರೆ.

ಈ ಎಲ್ಲಾ ಮಾಹಿತಿಯನ್ನು ಸ್ವಯಂ ಸುಶಾಂತ್ ಅವರೇ ತನಗೆ ನೀಡಿದ್ದಾಗಿ ರಿಯಾ ಹೇಳಿಕೊಂಡಿದ್ದಾಳೆ. ಸುಶಾಂತ್ ಸಿಂಗ್ ರಜಪೂತ್ ಅವರ ಲೋನಾವಾಲಾದ ತೋಟದ ಮನೆಯಲ್ಲಿ ನಡೆದ ಈ ಪಾರ್ಟಿಗಳಲ್ಲಿ ಕೊಕೇನ್, ಎಲ್ಎಸ್ಡಿ, ಮತ್ತು ಕ್ಯುರೇಟೆಡ್ ಗಂಜಾದಂತಹ ಅಕ್ರಮ ಔಷಧಿಗಳನ್ನು ನಟರು ಮತ್ತು ಅನೇಕ ಬಾಲಿವುಡ್ ಗಣ್ಯರು ಸೇವಿಸಿದ್ದಾರೆ ಎಂದು ರಿಯಾ ಚಕ್ರವರ್ತಿ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here