ನಾರ್ವೆ ಯೂರೋಪಿನ ಒಂದು ದೇಶವಾಗಿದೆ… ಅಲ್ಲಿ ಹೋದಲ್ಲಿ ಕೆಳಗಿನ ಚಿತ್ರದಲ್ಲಿ ತೋರಿಸಿರುವ ದೃಶ್ಯ ಮಾಮೂಲಿ ಎಂಬಂತೆ ನೋಡಬಹುದಾಗಿದೆ.. ಒಂದು ರೆಸ್ಟೋರೆಂಟ್.. ಅದರ ಕ್ಯಾಷ್ ಕೌಂಟರಿಗೆ ಒಬ್ಬ ಮಹಿಳೆ ಬಂದು “5 Coffee, 1 Suspension.. ಅನ್ನುತ್ತಾಳೆ ಮತ್ತೆ ಅವಳು 5 Coffeeಗೆ ಹಣ ಸಂದಾಯ ಮಾಡಿ ಕೇವಲ 4 Coffeeಗಳನ್ನು ಮಾತ್ರ ಒಯ್ಯುತ್ತಾಳೆ. ಸ್ವಲ್ಪ ಸಮಯದ ಬಳಿಕ ಮತ್ತೊಬ್ಬ ಬಂದು “4 Lunch, 2 Suspension ಅನ್ನುತ್ತಾನೆ ಮತ್ತೆ ಅವನು 4 Lunchಗೆ ಹಣ ತೆತ್ತು ಬರೇ 2 Lunch packets ಮಾತ್ರ ಕೊಂಡು ಹೋಗುತ್ತಾನೆ. ಆ ಮೇಲೆ ಇನ್ನೊಬ್ಬ ಬಂದು “10 Coffee, 6 Suspension ಅಂತ ಆರ್ಡರ್ ಕೊಟ್ಟು ಅವನು 10ಕ್ಕೆ ಹಣ ತೆತ್ತು 4 Coffee ಮಾತ್ರ ತೆಗೆದುಕೊಳ್ಳುತ್ತಾನೆ.

ಅನಂತರ ಒಬ್ಬ ಮುದುಕ ಹರಕು ಬಟ್ಟೆಯಲ್ಲಿ ಬಂದು “Any Suspended Coffee??” ಆಗ ಕೌಂಟರಿನಲ್ಲಿದ್ದ ಯುವತಿ “Yess!!” ಅನ್ನುತ್ತ 1 ಕಪ್ಪು ಬಿಸಿ Coffee ಅವನಿಗೆ ಕೊಡುತ್ತಾಳೆ. ಹಾಗೆಯೇ ಇನ್ನೊಬ್ಬ ಗಡ್ಡದವ ಬಂದು “Any Suspended Lunch??” ಅಂತ ಕೇಳಿದಾಗ ಕೌಂಟರಿನಲ್ಲಿ ಇದ್ದವರು 1 ಬಿಸಿ Lunch packetನೊಂದಿಗೆ 1 ನೀರಿನ ಬಾಟಲಿಯನ್ನು ಕೊಡುತ್ತಾರೆ.

ಒಂದು ಗ್ರುಪಿನ ಮೂಲಕ ಈ ರೀತಿ ಅಧಿಕ ಪೇಮೆಂಟು ಮಾಡುವುದು ಮತ್ತು ಇನ್ನೊಂದು ಗ್ರುಪ್ ಫ್ರೀಯಲ್ಲಿ ಆಹಾರ ಪಡೆಯುವ ಈ ಕ್ರಮ ಅಲ್ಲಿ ದಿನವಿಡೀ ನಡೆಯುತ್ತಿರುತ್ತದೆ. ಅಂದರೆ ತನ್ನ ಗುರುತು ಪರಿಚಯ ಮಾಡಿಸದೇ ಮತ್ತೆ ಯಾರನ್ನು ಗುರುತಿಸದೇ ಅಜ್ಞಾತ ಅಸಹಾಯಕರಿಗೆ ಸಹಾಯ ಮಾಡುವ ಈ ಪರಂಪರೆ ನಾರ್ವೆಯಲ್ಲಿ ನಡೆದುಕೊಂಡು ಬಂದಿದೆ.

ಮತ್ತೆ ನಮ್ಮಲ್ಲಿ ಮಾರಾಯ್ರೇ!.. 10-12 ಜನರ ಗುಂಪು ಒಬ್ಬ ರೋಗಿಗೆ 1 ಬಾಳೆಹಣ್ಣು ಕೊಡುವಾಗಲೂ ನಾಚಿಕೆ ಇಲ್ಲದೇ ಫೊಟೋ ಕ್ಲಿಕ್ಕಿಸಿಕೊಂಡು ದಾನವೀರರಂತೆ ಪೋಸು ಕೊಡುತ್ತಾರೆ.

Leave a Reply