ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಪರಿಷತ್ (ಐಸಿಸಿ) ನೂತನ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ರಾಂಕಿಂಗ್ ಬಿಡುಗಡೆ ಮಾಡಿದ್ದು, ತಂಡ ರಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ ಒಟ್ಟು 275 ರೇಟಿಂಗ್ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. 271 ರೇಟಿಂಗ್ ಅಂಕಗಳನ್ನು ಸೇರಿಸಿರುವ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ.

ಭಾರತ ಒಟ್ಟು 266 ರೇಟಿಂಗ್ ಅಂಕ ಸೇರಿಸಿದ್ದು, ಐಸಿಸಿ ಟಿ-20 ತಂಡ ರಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ 261 ಅಂಕಗಳೊಂದಿಗೆ ನಾಲ್ಕನೇ ಸ್ಥಾನ, ದಕ್ಷಿಣ ಆಫ್ರಿಕಾ 258 ರೇಟಿಂಗ್ ಅಂಕಗಳೊಂದಿಗೆ ಐದನೇ ಸ್ಥಾನ ಹಾಗೂ 242 ರೇಟಿಂಗ್ ಅಂಕ ಗಳಿಸಿರುವ ನ್ಯೂಜಿಲೆಂಡ್ ಆರನೇ ಸ್ಥಾನದಲ್ಲಿವೆ. ಶ್ರೀಲಂಕಾ (230), ಬಾಂಗ್ಲಾದೇಶ (229) ವೆಸ್ಟ್ ಇಂಡೀಸ್ (229), ಅಫ್ಘಾನಿಸ್ತಾನ (228), ಜಿಂಬಾಬ್ (191), ಐರ್ಲೆಂಡ್ (190). ಯುನೈಟೆಡ್ ಅರಬ್ ಏಮಿರೇಟ್ಸ್ (ಯುಎಇ-186) ಸ್ಕಾಟ್ಲಂಡ್ (182) ಹಾಗೂ ನೇಪಾಳ (180) ಐಸಿಸಿ ಟಿ-20 ತಂಡ ಬ್ಯಾಂಕಿಂಗ್‌ನಲ್ಲಿ ಕ್ರಮವಾಗಿ ಏಳು, ಎಂಟು, ಒಂಬತ್ತು, ಹತ್ತು, ಹನ್ನೊಂದು, ಹನ್ನೆರಡು, ಹದಿಮೂರು, ಹದಿನಾಲ್ಕು ಹಾಗೂ ಹದಿನೈದನೇ ಸ್ಥಾನದಲ್ಲಿವೆ.

LEAVE A REPLY

Please enter your comment!
Please enter your name here