ನವದೆಹಲಿ : ಗೋರಕ್ಷಣೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ಅಪರಾಧ ಎಂದು ಹೇಳುವ ಮೂಲಕ ಪರೋಕ್ಷವಾಗಿ ಗೋರಕ್ಷಕರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಗವತ್ ಅವರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಭವಿಷ್ಯದ ಭಾರತ ಮತ್ತು ಆರೆಸ್ಸೆಸ್ ದೃಷ್ಟಿಕೋನ ಎಂಬ ವಿಚಾರದ ಕುರಿತು ಮೂರು ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಮಾತಾನಾಡುತ್ತಾ, ಅಂತರ್ ಜಾತಿ ವಿವಾಹಕ್ಕೆ ಆರೆಸ್ಸೆಸ್ ವಿರೋಧ ಇಲ್ಲ. ಅದು ಸಂಪೂರ್ಣ ಓರ್ವ ಮಹಿಳೆ ಮತ್ತು ಪುರುಷರಿಗೆ ಸಂಬಂಧಿಸಿದ ವಿಷಯವಾಗಿದೆ.

ಅಂತರ್ ಜಾತಿ ವಿವಾಹ ಶಿಕ್ಷಣ , ಗೋರಕ್ಷಕರ ದಾಳಿ ಬಗ್ಗೆ ಪ್ರಶ್ನೆಗೆ ಉತ್ತರಿಸುತ್ತಾ ಅವರು, ಸಂಘಪರಿವಾರದವರೇ ಹೆಚ್ಚು ಅಂತರ್ ಜಾತಿ ವಿವಾಹ ಆಗಿದ್ದಾರೆ. ಭಾರತಕ್ಕೆ ಹೊಸ ಶಿಕ್ಷಣ ನೀತಿಯ ಅಗತ್ಯ ಇದೆ. ಗೋರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ, ಅದು ಅಪರಾಧ. ಕಾನೂನು ಕೈಗೆತ್ತಿಕೊಳ್ಳುವವರಿಗೆ ಶಿಕ್ಷೆ ನೀಡಬೇಕು. ಅದರ ಹೊರತಾಗಿ ಗೋ ರಕ್ಷಣೆಯನ್ನು ನಾವು ಮಾಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Leave a Reply