ಹೊಸದಿಲ್ಲಿ: ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಬಾಲಿವುಡ್ ನಟಿ ಅದರ ಬೆನ್ನಿಗೆ ಇನ್ನಷ್ಟು ಮಂದಿಯ ವಿರುದ್ಧ ಆರೋಪ ಹೊರಿಸಿದ್ದಾರೆ. ನಟ ಇರ್ಫಾನ್ ಖಾನ್ ಮುಂದೆ ಬಟ್ಟೆಯಿಲ್ಲದೆ ನೃತ್ಯ ಮಾಡುವಂತೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದರು ಎಂದು ತನುಶ್ರೀ ಹೊಸ ಆರೋಪ ಮಾಡಿದ್ದಾರೆ.

2005ರಲ್ಲಿ ಬಿಡುಗಡೆಗೊಂಡ ಚೊಕ್ಲೆಟ್ ಸಿನೆಮಾದ ಚಿತ್ರೀಕರಣದ ವೇಳೆ ನಡೆದ ಘಟನೆ ಇದು ಎಂದು ತನುಶ್ರೀ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇರ್ಫಾನ್‍ರ ಕ್ಲೋಸಪ್ ಶಾಟ್ ಚಿತ್ರೀಕರಿಸುವಾಗ ಮುಖದ ಭಾವನೆಗಳು ಬರಲಿಕ್ಕಾಗಿ ತನ್ನಲ್ಲಿ ಬಟ್ಟೆಯಿಲ್ಲದೆ ಡ್ಯಾನ್ಸ್ ಮಾಡಲು ನಿರ್ದೇಶಕ ಹೇಳಿದರು. ಅಂದು ಇರ್ಫಾನ್ ಖಾನ್ ಮತ್ತು ಸುನೀಲ್ ಶೆಟ್ಟಿ ತನ್ನನ್ನು ರಕ್ಷಿಸಿದರು ಎಂದು ತನುಶ್ರೀ ಹೇಳಿದರು.

ಆ ದೃಶ್ಯದಲ್ಲಿ ತಾನಿಲ್ಲದಿದ್ದರೂ ನಿರ್ದೇಶಕ ಹಾಗೆ ಮಾಡಲು ಹೇಳಿದರು. ಆಗ ಇರ್ಫಾನ್ ತನಗೆ ಭಾವನೆ ಪ್ರಕಟಿಸಲು ಯಾರೂ ಬಟ್ಟೆಬಿಚ್ಚುವುದು ಬೀಡ ಎಂದರು. ನಾನು ಬಂದು ಭಾವನೆ ಪ್ರಕಟಿಸಲು ಸಹಾಯ ಮಾಡಬೇಕಾ ಎಂದು ಸುನೀಲ್ ಶೆಟ್ಟಿ ಕೇಳಿದ್ದರು ಎಂದು ತನುಶ್ರೀ ದತ್ತಾ ಬಹಿರಂಗಪಡಿಸಿದರು.

Leave a Reply