ಹೊಸದಿಲ್ಲಿ: ಪ್ರತಿಭಟನಾಕಾರರು ಶಬರಿಮಲೆ ಪ್ರವೇಶಿಸದಂತೆ ಇಬ್ಬರು ಮಹಿಳೆಯರನ್ನು ತಡೆದು ವಾಪಸು ಹೋಗುವಂತೆ ಮಾಡಿದ ಘಟನೆ ವರದಿಯಾದ ಬೆನ್ನಿಗೆ ಬಾಂಗ್ಲಾದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಶಬರಿಮಲೆ ಪ್ರವೇಶಕ್ಕೆ ಸಿದ್ಧಳಿದ್ದೇನೆ ಎಂದು ತಿಳಿಸಿದ್ದಾರೆ. ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಾಕಿದ ತಸ್ಲಿಮಾ ನಸ್ರೀನ್ ತನಗೆ ಐವತ್ತಾರು ವರ್ಷ ವಯಸ್ಸೆಂದು ಹೇಳಿಕೊಂಡಿದ್ದಾರೆ. ತಾನು ಧರ್ಮಭಕ್ತಳಲ್ಲ ನಾಸ್ತಿಕ ಮಹಿಳೆ ತನಗೆ ಶಬರಿಮಲೆಗೆ ಪ್ರವೇಶ ಸಿಗಬಹುದೇ ಎಂದು ಪ್ರಶ್ನಿಸಿದ್ದಾರೆ.

ತನಗೆ 56 ವರ್ಷವಾಗಿದ್ದು ಶಬರಿಮಲೆ ಬೆಟ್ಟ ಏರಲು ಅವಕಾಶ ಸಿಗಬಹುದೇ. ಆದರೆ ತಾನು ನಾಸ್ತಿಕ ಮಹಿಳೆಯಾಗಿದ್ದೇನೆ ಎಂದು ಕೇಳಿದ್ದು ತನ್ನ ವಿವಾದಿತ ಬರಹಗಳಿಂದಾಗಿ ಬಾಂಗ್ಲಾದೇಶದಿಂದ ಗಡೀಪಾರುಗೊಂಡ ಬಳಿಕ ಭಾರತಕ್ಕೆ ಬಂದು ರಾಜಕೀಯ ಆಶ್ರಯ ಪಡೆದುಕೊಂಡು ಕೊಲ್ಕತಾದಲ್ಲಿ ನೆಲೆಸಿದ್ದಾರೆ.

ನಿನ್ನೆ ಎರ್ನಾಕುಳಂನ ಆಕ್ಟಿವಿಸ್ಟ್ ಮತ್ತು ನಟಿ ರಹ್ನಾ ಫಾತಿಮಾ, ಆಂಧ್ರ ಪ್ರದೇಶದ ಟಿವಿ ಚ್ಯಾನೆಲೊಂದರ ವರದಿಗಾರ್ತಿ ಕವಿತಾರನ್ನು ಅಯ್ಯಪ್ಪ ಭಕ್ತರು ಸನ್ನಿಧಾನಕ್ಕೆ ತೆರಳದಂತೆ ತಡೆದಿದ್ದರು. ನಂತರ ಪೊಲೀಸ್ ರಕ್ಷಣೆಯಲ್ಲಿ ಅವರನ್ನು ಮರಳಿ ಕಳುಹಿಸಲಾಗಿತ್ತು. ಈ ಘಟನೆಯ ಬೆನ್ನಿಗೆÀ ಬೆನ್ನಿಗೆ ತಸ್ಲಿಮಾ ಟ್ವಿಟರ್‍ನಲ್ಲಿ ಈ ರೀತಿಯ ಪೋಸ್ಟ್ ಹಾಕಿ ಶಬರಿಮಲೆ ಬೆಟ್ಟ ಏರುವ ಇಚ್ಛೆಯನ್ನು ಪ್ರಕಟಿಸಿದ್ದಾರೆ.

Leave a Reply