ನೆಲ್ಲಿಕಾಯಿಯನ್ನು ನಾಲ್ಕು ತುಂಡುಗಳಾಗಿ ಮಾಡಿ ಬಿಸಿಲಿನಲ್ಲಿ ಒಣಗಿಸಬೇಕು. ಚೆನ್ನಾಗಿ ಒಣಗಿಸಿದ ನೆಲ್ಲಿಕಾಯಿ ತುಂಡುಗಳಿಂದ ತಂಬುಳಿ ಮಾಡಬಹುದು. ಬೀಜವನ್ನು ತೆಗೆಯಬೇಕು ಉಪ್ಪು ಹಾಕಿ ಒಣಗಿಸಬೇಕು. ಹಾಗೆಯೇ ಒಣಗಿಸಬಹುದು.

ಬೇಕಾಗುವ ಸಾಮಗ್ರಿಗಳು:
ತೆಂಗಿನ ತುರಿ – ಅರ್ಧ ಬಟ್ಟಲು
ನೆಲ್ಲಿಕಾಯಿ – 8 ತುಂಡು
ಮಜ್ಜಿಗೆ – 1 ಲೋಟ
ಉ – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:

ನೆಲ್ಲಿಕಾಯಿ ತುಂಡುಗಳನ್ನು ನೀರಿನಲ್ಲಿ ನೆನೆಸಿ ನಂತರ ತೆಂಗಿನ ಕಾಯಿ ತುರಿ ಯೊಂದಿಗೆ ಮಿಕ್ಸಿಯಲ್ಲಿ ರುಬ್ಬಿ ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ ನಂತರ ಮಜ್ಜಿಗೆ ಹಾಕಿ ಕುದಿಸಿ ಬೇಕಾದರೆ ಸಾಸಿವೆ ಒಗ್ಗರಣೆ ಮಾಡಿ.

ಇನ್ನೊಂದು ವಿಧಾನ:

ನೆಲ್ಲಿಕಾಯಿ ತುಂಡುಗಳನ್ನು ತುಪ್ಪ ದಲ್ಲಿ ಹುರಿದು ತೆಂಗಿನ ಕಾಯಿ ತುರಿ ಯೊಂದಿಗೆ ರುಬ್ಬ ಬೇಕು. ಮತ್ತೆ ಮೇಲಿನ ವಿಧಾನವನ್ನೇ ಅನುಸರಿಸಬೇಕು. ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಿದೆ.

Leave a Reply