ಆಂಧ್ರ ಪ್ರದೇಶ: ಟಿಡಿಪಿ ಶಾಸಕಿ ಗಿದ್ದಿ ಈಶ್ವರಿಗೆ ನಕ್ಸಲರು ಕೊಲೆ ಬೆದರಿಕೆಯೊಡ್ಡಿದ್ದಾರೆಂದು ವರದಿಯಾಗಿದೆ. ಗಿದ್ದಿ ಈಶ್ವರಿ ಪದೇರುವಿನ, ಚಂದ್ರಬಾಬು ನಾಯ್ಡು ಪಕ್ಷ ಟಿಡಿಪಿಯ ಶಾಸಕಿಯಾಗಿದ್ದಾರೆ. ಕಳೆದ ವಾರ ಇಬ್ಬರು ಟಿಡಿಪಿ ನಾಯಕರನ್ನು ನಕ್ಸಲರು ಕೊಲೆ ಮಾಡಿದ್ದು ಇದರ ಬೆನ್ನಿಗೆ ಶಾಸಕಿಯ ಗತಿ ಮುಗಿಸುತ್ತೇವೆ ಎಂಬ ರೀತಿಯಲ್ಲಿ ಪತ್ರ ಬರೆಯಲಾಗಿದೆ.

ಮಾವೋವಾದಿ ಕೇಂದ್ರ ಸಮಿತಿ ಶಾಸಕಿಗೆ ಬೆದರಿಕೆ ಒಡ್ಡಿದ್ದು, ಶಾಸಕಿ ಗೋತ್ರ ಜನವಿಭಾಗವನ್ನು ಅಪಮಾನಿಸುತ್ತಿದ್ದಾರೆ. ಮತ್ತು ಬೋಕ್ಸೈಟ್ ಖನನಕ್ಕೆ ಸಹಾಯ ಮಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಇದೇ ಆರೋಪದಲ್ಲಿ ಈ ಹಿಂದೆ ಇಬ್ಬರಿಗೆ ಶಿಕ್ಷೆ ನೀಡಲಾಗಿದೆ. ಈ ರೀತಿಯಲ್ಲಿ ಈಶ್ವರಿಯವರು ವರ್ತಿಸಿದರೆ ಇವರನ್ನೂ ಕೊಲೆ ಮಾಡುತ್ತೇವೆ.

ಟಿಡಿಪಿಯಿಂದ 20ಕೋಟಿ ರೂಪಾಯಿ ಪಡೆದು ಈಶ್ವರಿ ಟಿಡಿಪಿ ತೊರೆಯಬೇಕು. ಬೋಕ್ಸೈಟ್ ಗಣಿಗಾರಿಕೆಯ ವಿರುದ್ಧ ಕೆಲಸ ಮಾಡಬೇಕು ಇಲ್ಲದಿದ್ದರೆ ನಿಮ್ಮ ಗತಿಯೂ ಇದೇ ಆಗಿರುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಜತೆಗೆ ಟಿಡಿಪಿಯಿಂದ ಸ್ವೀಕರಿಸಿದ ಹಣವನ್ನು ಎರಡು ತಿಂಗಳೊಳಗೆ ಬಡವರಿಗೆ ಹಂಚಬೇಕೆಂದು ನಕ್ಸಲರು ತಿಳಿಸಿದ್ದಾರೆ.

ಕಳೆದ ಸೆಪ್ಟಂಬರ್ 24ರಂದು ಟಿಡಿಪಿ ಶಾಸಕ ಸರ್ವೇಶ್ವರ ರಾವ್ ಮತ್ತು ಮಾಜಿ ಶಾಸಕ ಸೈವೇರಿ ಸೋಮುರನ್ನು ಮಾವೋವಾದಿಗಳು ಅರಕು ಎಂಬಲ್ಲಿ ಇಬ್ಬರು ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳುತ್ತಿದ್ದ ವೇಳೆ ವಿಶಾಖಪಟ್ಟಣಂದಿಂದ 125 ಕಿಲೊ ಮೀಟರ್ ದೂರದ ತುಡಂಗಿ ಗ್ರಾಮದಲ್ಲಿ ದಾಳಿ ಮಾಡಿ ಹತ್ಯೆ ಮಾಡಿದ್ದರು.

Leave a Reply