ತಲಶ್ಸೇರಿ(ಕೇರಳ): ಮಂಬರಂ ಎಂಬಲ್ಲಿನ ಖಾಸಗಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಧ್ಯಾಪಕಿಯೊಬ್ಬರು ಎರಡನೆ ತರಗತಿಯ ವಿದ್ಯಾರ್ಥಿಗೆ ಹೊಡೆದ ಪರಿಣಾಮ ಕೈಯ ನರ ತುಂಡರಿಸಿದೆ. ತಲಶ್ಸೇರಿ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿಯ ಕೈನರವನ್ನು ಶಸ್ತ್ರಕ್ರಿಯೆ ಮೂಲಕ ಪೂರ್ವ ಸ್ಥಿತಿಯಲ್ಲಿದ್ದಂತೆ ಮಾಡಲಾಗಿದೆ.ಗಾಯಾಳು ವಿದ್ಯಾರ್ಥಿಯನ್ನು ಶಿಶುಕಲ್ಲಯಾಣ ಸಮಿತಿ ಸಮಸ್ಯೆಯರು ಭೇಟಿಯಾಗಿ ಹೇಳಿಕೆ ಪಡೆದುಕೊಂಡಿದ್ದಾರೆ.

ಶುಕ್ರವಾರ ಕ್ಲಾಸ್ ಪರೀಕ್ಷೆಗೆ ಬರದ್ದರಿಂದ ಕೋಪ ಗೊಂಡ ಅಧ್ಯಾಪಕಿ ಸ್ಟೀಲ್ ಸ್ಕೇಲಿನಿಂದ ಕೈಗೆ ಹೊಡೆದರು. ಕೈಯಿಂದ ರಕ್ತ ಒಸರತೊಡಗಿತು. ಶಾಲಾಧ್ಯಾಪಕರು ಮಗುವನ್ನು ಮಂಬರಂನ ಖಾಸಗಿ ಕ್ಲಿನಿಕ್‍ಗೆ ಕರೆದು ಕೊಂಡು ಹೋಗಿ ತೋರಿಸಿದರು. ಅಲ್ಲಿನ ವೈದ್ಯರು ತಲಶ್ಶೇರಿ ಇಂದಿರಾಗಾಂಧಿ ಸಹಕರಾರಿ ಆಸ್ಪತ್ರೆಗೆ ದಾಖಲಿಸಲು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಚೈಲ್ಡ್ ಲಐನ್ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಗಾಯಗೊಂಡ ಮಗುವಿನ ತಂದೆ ಪಿಣರಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply