ಶಾಲಾ ಕಾಲೇಜುಗಳಲ್ಲಿ ಬಹುಶಃ ಶಿಕ್ಷಕರ ಲಘು ಹಾಸ್ಯದೊಂದಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರಸ್ಪರ ಆತ್ಮೀಯವಾಗಿ ವರ್ತಿಸುತ್ತಾರೆ. ಆದರೆ ಈ ತಮಾಷೆಗೂ ಒಂದು ಮಿತಿ ಇರಬೇಕು. ಆದರೆ ಅದು ಕಿರುಕುಳ ಮತ್ತು ಬೆದರಿಕೆಯ ಮಟ್ಟಕ್ಕೆ ಬೆಳೆಯಬಾರದು. ಹೆತ್ತವರು, ಮತ್ತು ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಶಿಕ್ಷಕರನ್ನು ಹೇಗೆ ಗೌರವಿಸಬೇಕು ಮತ್ತು ಮಕ್ಕಳನ್ನೂ ಹೇಗೆ ಆತ್ಮೀಯವಾಗಿ ನೋಡಿಕೊಳ್ಳಬೇಕು ಎಂಬುದನ್ನು ಕಲಿಸಬೇಕು.

ಅಂತಹ ಒಂದು ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ತರಗತಿ ಮಾಡುತ್ತಿದ್ದ ಹಿರಿಯ ಶಿಕ್ಷಕರಿಗೆ ಆನ್ಲೈನ್ ಕಿರುಕುಳ ನೀಡುತ್ತಿದ್ದಾರೆ. ಈ ವೀಡಿಯೊ ನಿಜವಾಗಿಯೂ ಹೃದಯ ವಿದ್ರಾವಕವಾಗಿದೆ. ಈ ವೀಡಿಯೊವನ್ನು ಟೆಡ್ ದಿ ಸ್ಟೋನರ್ ಎಂಬ ಇನ್ಸ್ಟಾಗ್ರಾಮ್ ಖಾತೆಯು ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.

ಪೋಸ್ಟ್‌ನ ಶೀರ್ಷಿಕೆ, “ಇದು ಖಂಡಿತವಾಗಿಯೂ ಇದು ಹಂಚಿಕೊಳ್ಳಲು ಅರ್ಹವಾಗಿದೆ. . ಓದಿ, ಅರ್ಥಮಾಡಿಕೊಳ್ಳಿ, ಅನ್ವಯಿಸಿ. ಟ್ರೋಲಿಂಗ್ ಮತ್ತು ಬುಲ್ಲಿಂಗ್‌ ಸಮ ಅಲ್ಲ . ನೀವು ಯಾರಿಗೂ ನೋವುಂಟು ಮಾಡದೆ ತಮಾಷೆ ಮಾಡಬಹುದು”

ಈ ದಿನಗಳಲ್ಲಿ ಶಿಕ್ಷಕರು ಹೇಗೆ ಅಸಹಾಯಕರಾಗಿದ್ದಾರೆ ಎಂಬುದರ ಕುರಿತು ಈ ವೀಡಿಯೊ ಹೇಳುತ್ತಿದೆ. ಕರೋನಾದಿಂದಾಗಿ ಶಿಕ್ಷಣ ವ್ಯವಸ್ಥೆಯು ಬದಲಾಗಿದೆ. ಈ ಸಮಯದಲ್ಲಿ ಶಿಕ್ಷಕರ ಮೇಲೆ ಸಾಕಷ್ಟು ಒತ್ತಡವಿದ್ದು, ಪ್ರಾಂಶುಪಾಲರು ಇದ್ದಕ್ಕಿದ್ದಂತೆ 55 ವರ್ಷದ ಶಿಕ್ಷಕನನ್ನು ಕರೆದು ಆನ್‌ಲೈನ್ ತರಗತಿ ಮಾಡಲು ಹೇಳಿದರು. ಅವರು ಇಲ್ಲ ಎಂದು ಹೇಳುವಂತಿಲ್ಲ. ಏಕೆಂದರೆ ಅವರು ನಿರಾಕರಿಸಿದರೆ ಅವರನ್ನು ಈ ಪರಿಸ್ಥಿತಿಯಲ್ಲಿ ವಜಾ ಮಾಡಲಾಗುತ್ತದೆ. ಈ ವಯಸ್ಸಿನಲ್ಲಿ, ಇಂತಹ ಕೆಲಸ ಮಾಡಲು ಸಾಧ್ಯವಾಗದಿರಬಹುದು. ಈ ಪರಿಸ್ಥಿತಿಯಲ್ಲಿ, ಕುಟುಂಬವನ್ನು ನಡೆಸಲು ಬೇರೆ ಆಯ್ಕೆಗಳಿಲ್ಲ” ಎಂಬ ಬರಹದೊಂದಿಗೆ ಶೇರ್ ಮಾಡಲಾಗಿದೆ.

View this post on Instagram

This definitely deserved a share. Read, understand, implement. Trolling ≠ bullying. You can be funny without hurting someone Principal suddenly called the 55 year old teacher and told him to learn how to take class online. He doesn’t have much to say as he knows that if he denies he will be laid off, at this age in this situation he can’t do any other job, to pay for his family he has no choice. Unwillingly he takes his smart phone to his daughter. His daughter helped him to understand the basic of Zoom, his hands often shake to go around the tabs, he often freezes trying to understand how this thing works but he has no choice. The next day he goes to a market to buy a new white board. The price of these small board soared up, but without these how can he take the class? He took the board in a rickshaw and came home. Placed the board in a chair and started practicing the lesson. It was harder than he thought, staring at a camera and teaching but he has no choice. The next day he wore a new shirt, will be seeing his students after one and half month, his daughter helped him to setup the smart phone, and the students were added and the class went on. He was shaky, his voice cracked every now and then he was nervous but he has no choice. Suddenly an unknown ID started using slang at him, the F word, the A word, open threats. He couldn’t understand how should he react, he shouted out of anger and embarrassment, a teacher is being humulated infront of his students. His life work of earning respect from his students seemed to vanish in seconds. His daughter taught him to mute students but the student could unmute himself, the student kept on using slangs and he did it for entertainment. The only thing the teacher could do was to end the class, as he has no choice. He called for his daughter, she came running and saw her father in tears, she held him tightly tried to calm him down but he kept crying as he never faced such humiliation in his life. That he had troubled sleeping that night, as he knew the next day he has to wake up and face the same ordeal as he has no choice. Note:Abusing a teacher doesn’t make you cool, It makes you sick. Credits: Syed Mohamad Fahim/FB

A post shared by Ted The Stoner (@tedthestoner) on

ಟಿಪ್ಪಣಿ ಹೀಗಿದೆ, “ಮರುದಿನ ಅವರು ಹೊಸ ಶರ್ಟ್ ಧರಿಸಿ ಒಂದೂವರೆ ತಿಂಗಳ ನಂತರ ತಮ್ಮ ವಿದ್ಯಾರ್ಥಿಗಳನ್ನು ನೋಡುತ್ತಿದ್ದರು. ಅವರ ಮಗಳು ತನ್ನ ಸ್ಮಾರ್ಟ್ ಫೋನ್ ಸಹಾಯ ದಿಂದ ಆನ್ಲೈನ್ ವ್ಯವಸ್ಥೆ ಮಾಡುವಲ್ಲಿ ಸಹಾಯ ಮಾಡಿದ್ದಳು. ತರಗತಿ ಪ್ರಾರಂಭವಾಯಿತು. ಅವರು ಮೊದಲೇ ಆನ್ಲೈನ್ ಅನುಭವ ಹೊಂದಿರಲಿಲ್ಲ. ಅವರ ಧ್ವನಿ ನಡುಗುತ್ತಿತ್ತು. ಇದ್ದಕ್ಕಿದ್ದಂತೆ ಅಪರಿಚಿತ ಐಡಿ ಯಿಂದ ಅವರಿಗೆ ಕಿರುಕುಳ ಬೈಗುಳ ಬೆದರಿಕೆ ಬರಲು ತೊಡಗಿತು. ಅವರಿಗೆ ಅರ್ಥ ಆಗಲಿಲ್ಲ ಹೇಗೆ ಪ್ರತಿಕ್ರಿಯೆ ಕೊಡಬೇಕು ಎಂದು ತಿಳಿಯಲಿಲ್ಲ. ಶಿಕ್ಷಕ ತನ್ನ ವಿದ್ಯಾರ್ಥಿಗಳ ಮುಂದೆ ಅವಮಾನಿಸಲ್ಪಟ್ಟಿದ್ದರಿಂದ ಕೋಪಗೊಂಡು ಮುಜುಗರಕ್ಕೀಡಾಗುತ್ತಾರೆ. ಮಗಳು ವಿದ್ಯಾರ್ಥಿಗಳನ್ನು ಮ್ಯೂಟ್ ಮಾಡಲು ಸಲಹೆ ಕೊಟ್ಟರೂ ಯಾವುದೇ ಪ್ರಯೋಜನ ಆಗಲಿಲ್ಲ. ಯಾಕೆಂದರೆ ವಿದ್ಯಾರ್ಥಿಗಳೂ ಅವಮಾನ ಮಾಡುತ್ತಿದ್ದರು. ಸ್ವತಃ ವಿದ್ಯಾರ್ಥಿಗಳಿಗೆ unmute ಮಾಡಲು ಸಾಧ್ಯವಾಗುತ್ತಿತ್ತು. ಅವರು ಬೈಗುಳ ಮತ್ತು ಅವಾಚ್ಯ ಶಬ್ದ ಬಳಕೆ ಮಾಡುತ್ತಿದ್ದರು. ಕೊನೆಗೆ ತರಗತಿಯನ್ನು ಅರ್ಧದಲ್ಲಿಯೇ ನಿಲ್ಲಿಸಲಾಯಿತು.

LEAVE A REPLY

Please enter your comment!
Please enter your name here