ಹೊಸದಿಲ್ಲಿ : ಕೊರೊನ ಹರಡಿರುವ ಹಿನ್ನೆಲೆಯಿಂದ ಮನೆ, ಕಚೇರಿಗಳಲ್ಲಿ ಎಸಿಯನ್ನು ಉಪಯೋಗಿಸುವ ಕುರಿತು ಕೇಂದ್ರ ಸರಕಾರ ಕೆಲವು ಸೂಚನೆಗಳನ್ನು ನೀಡಿದೆ. ಕೊರೊನಾ ಕಾಲದಲ್ಲಿ ಗೃಹ ಉಪಯೋಗದ ಎಸಿಯ ಉಷ್ಣತೆ 24 ಸೆಲ್ಸಿಯಸ್ ಮತ್ತು 30 ಸೆಲ್ಸಿಯಸ್‍ನ ನಡುವೆ ಇರಬೇಕು ಎಂದು ಕೇಂದ್ರ ಸರಕಾರ ಹೇಳಿದೆ. 40ರಿಂದ 70ವರೆಗೆ ಟೆಂಪರೇಚರ್ ಇರಬೇಕು. ಎಸಿಯಿಂದ ಹೊರಬರುವ ತಂಗಾಳಿ ಜೊತೆಗೆ ಹೊರಗಿನಿಂದ ಬರುವ ಗಾಳಿಯೂ ಬೆರೆಕೆಗೊಳ್ಳಬೇಕಾಗಿದೆ. ಆದ್ದರಿಂದ ಎಸಿ ಹಾಕಿದಾಗ ಕಿಟಕಿಯನ್ನು ಸ್ವಲ್ಪ ತೆಗೆದಿರಿಸಿ ಎಗ್ಸ್ ಹೊಸ್ಟರ್ ಫ್ಯಾನ್ ಹಾಕಬೇಕು. ಒಣಹವೆಯಲ್ಲಿ ಟೆಂಪರೇಚರ್ 40 ಡಿಗ್ರಿಗಿಂತ ಕಡಿಮೆ ಆಗಬಾರದು. ಬಾಷ್ಫೀಕರಣಕ್ಕಾಗಿ ಕೋಣೆಯಲ್ಲಿ ಒಂದು ಪಾತ್ರೆಯಲ್ಲಿ ನೀರು ಇಟ್ಟು ಹ್ಯೂಮಿಡಿಟಿ ಹೆಚ್ಚಿಸಬೇಕಾಗಿದೆ.

ಎಸಿ ಹಾಕಿಲ್ಲದಿದ್ದರೆ ಕೋಣೆಗೆ ಗಾಳಿ ಬರುವಂತಹ ವ್ಯವಸ್ಥೆ ಮಾಡಬೇಕು. ಫ್ಯಾನ್ ಹಾಕುವಾಗಲೂ ಕಿಟಕಿಯ ಬಾಗಿಲು ಸ್ವಲ್ಪ ತೆರೆದಿಡಬೇಕು. ವಾಣಿಜ್ಯ, ಉದ್ಯಮ ಕೇಂದ್ರಗಳಲ್ಲಿ ಗಾಳಿ ಸಂಚಾರ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಎಗ್ಸ್ ಹೊಸ್ಟರ್ ಗಳನ್ನು ಉಪಯೋಗಿಸಬೇಕೆಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಲಾಕ್ ಡೌನ್‍ನಲ್ಲಿ ಹಲವು ಅಂಗಡಿ ಇತ್ಯಾದಿ ಬಂದ್ ಆಗಿರುವುದರಿಂದ ಎಸಿಯ ಫಿಲ್ಟರ್ ಗಳ ಒಳಗೆ ಫಂಗಸ್, ಚಿಕ್ಕ ಪ್ರಾಣಿಗಳು, ಇಲಿ ವಿಸರ್ಜನೆ ಒಟ್ಟುಗೂಡಿರುವ ಸಾಧ್ಯತೆ ಇದೆ. ಇದರಿಂದ ಆರೋಗ್ಯ ಸಮಸ್ಯೆ ಆಗಬಹುದು. ಆದ್ದರಿಂದ ಇವೆಲ್ಲ ರಿಪೇರಿ ಮಾಡಿ ಎಸಿಯನ್ನು ಉಪಯೋಗಿಸಿ. ಎಸಿ ಟೆಕ್ನಿಸಿಯನ್‍ ನಿಂದ ಶುಚಿಗೊಳಿಸಬೇಕೆಂದು ಕೇಂದ್ರ ಸರಕಾರ ಹೇಳಿದೆ.

ಮುಚ್ಚಿದ ಕೋಣೆಯಲ್ಲಿ ಎಸಿ ಹಾಕುವುದು ಕೊರೊನಾ ಹರಡುವುದಕ್ಕೆ ಕಾರಣವಾಗುತ್ತದೆ ಎಂದು ವರದಿಯಾದ ನಂತರ ಕೇಂದ್ರ ಸರಕಾರ ಇದಕ್ಕೆ ಸಂಬಂಧಿಸಿದ ಮಾರ್ಗದರ್ಶನಗಳನ್ನು ಹೊರಡಿಸಿದೆ. ಇಂಡಿಯನ್ ಸೊಸೈಟಿ ಆಫ್ ರೆಫ್ರಜರೇಟಿಂಗ್ ಆಂಡ್ ಏರ್ ಕಂಡಿಶನರ್ ಇಂಜಿನಿಯರ್ಸ್ ತಯಾರಿಸಿದ ಮಾರ್ಗಸೂಚಿಗಳನ್ನು ಕೇಂದ್ರ ಲೋಕಪಯೋಗಿ ಇಲಾಖೆ ಹಂಚಿಕೊಂಡಿದೆ.

 

LEAVE A REPLY

Please enter your comment!
Please enter your name here