ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅತ್ಯಂತ ಉತ್ತಮ ಗುಣಮಟ್ಟದ ಕ್ಯಾಮೆರಾಗಳುಳ್ಳ ದೂರ ಸಂವೇದಿ ಉಪಗ್ರಹ ಕಾರ್ಟೋಸ್ಯಾಟ್-3ನ್ನು ಯಶಸ್ವಿಯಾಗಿ 509 ಕಿ.ಮೀ ದೂರದ ಕಕ್ಷೆಗೆ ಹಾರಿಬಿಟ್ಟಿದೆ. ಧ್ರುವೀಯ ಉಪಗ್ರಹ ಉಡಾವಣಾ ವಾಹನ (ಪಿಎಸ್ ಎಲ್‌ವಿ)-ಸಿ47 ಮೂಲಕ ಇದರ ಜೊತೆಗೆ ಇತರೆ 13 ಅಮೆರಿಕದ ನ್ಯಾನೋ ಉಪಗ್ರಹಗಳನ್ನೂ ಕೂಡ ಕಕ್ಷೆಗೆ ಸೇರಿಸಿದೆ. ಇದು ಶ್ರೀಹರಿಕೋಟದಿಂದ 74ನೇ ಉಡಾವಣೆ ಯಾಗಿದೆ.

ಇಸ್ರೋದ ಐಆರ್‌ಎಸ್‌ ಸರಣಿ ಉಪಗ್ರಹಗಳ ಬದಲಿಗೆ ಅತ್ಯಾಧುನಿಕ ಕಾರ್ಟೋಸಾಟ್ ಸರಣಿ ಉಪಗ್ರಹಗಳನ್ನು ಹಾರಿಬಿಡಲಾಗುತ್ತಿದೆ.
ಕಾರ್ಟೋಸ್ಯಾಟ್-3 1600 ಕೆ.ಜಿ ತೂಕ ಹೊಂದಿದ್ದು, ಇದರ ಜೀವಿತಾವಧಿ 5 ವರ್ಷಗಳು. ನಗರ ಯೋಜನೆ, ಗ್ರಾಮೀಣ ಮೂಲಸೌಕರ್ಯ ಅಭಿವೃದಿ, ತೀರ ಪ್ರದೇಶದ ಅಭಿವೃದ್ಧಿ ಮತ್ತು ಗಡಿ ರಕ್ಷಣೆಯಲ್ಲಿಯೂ ಇದು ರವಾನಿಸುವ ಸ್ಪಷ್ಟ ಚಿತ್ರಗಳು ಉಪಯೋಗವಾಗಬಲ್ಲದು ಎಂದು ಇಸ್ರೋ ತಿಳಿಸಿದೆ.

LEAVE A REPLY

Please enter your comment!
Please enter your name here