ಲೂಧಿಯಾನ: ಉಪದ್ರವ ಸಹಿಸಲಾಗದೆ ತನ್ನ ಕಿರಿಯ ಸಹೋದರನನ್ನು ಕೊಂದು ಬ್ಯಾಗ್ ನಲ್ಲಿ ಹಾಕಿದ ರೇಣು(19) ಎಂಬಾಕೆಯನ್ನು ಪಂಜಾಬಿನ ಲೂಧಿಯಾನಾದಲ್ಲಿ ಬಂಧಿಸಲಾಗಿದೆ. ನಾನು ಎಲ್ಲಿ ಹೋದರೂ ತನ್ನನ್ನು ಹಿಂಬಾಲಿಸುತ್ತಿದ್ದ ಐದರ ಹರೆಯದ ಸಹೋದರನ್ನು ಹತ್ಯೆ ಮಾಡಿದ್ದೇನೆಂದು ಆಕೆ ಹೇಳಿಕೊಂಡಿದ್ದಾಳೆ.
ಕಳೆದ ಅಕ್ಟೋಬರ್ ಆರರಂದು ಈ ಕೃತ್ಯ ನಡೆದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು ತಾಯಿ ಹೋದ ವೇಳೆ ಈ ಕೃತ್ಯ ನಡೆದಿದೆ. ತಾಯಿಯೊಂದಿಗೆ ಹೊರಟ ತಮ್ಮನನ್ನು ಚಾಕ್ಲೇಟ್ ತೋರಿಸಿ ಹೋಗದಂತೆ ಮಾಡಿ ಬಳಿಕ ಮನೆಯೊಳಗೆ ಕರೆದು ಕತ್ತು ಹಿಸುಕಿ ಕೊಂದಿದ್ದಳು. ತಂದೆ ತಾಯಿ ಮನೆಗೆ ಬಂದಾಗ ತಮ್ಮ ಕಾಣೆಯಾಗಿದ್ದಾನೆಂದು ಗೋಗರೆದಿದ್ದಳು. ಪೋಲೀಸರು ತೀವ್ರ ತನಿಖೆ ನಡೆಸಿದಾಗ ಬ್ಯಾಗ್ ನಲ್ಲಿ ಮೃತದೇಹ ಪತ್ತೆಯಾಯಿತು.
ತಾನು ಮಾಡಿದ ಕೃತ್ಯದ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸದ ಆಕೆ ತಾನು ಎಲ್ಲಿ ಹೋದರೂ ನನ್ನನ್ನು ಹಿಂಬಾಲಿಸುತ್ತಿದ್ದರಿಂದ ಈ ರೀತಿ ಮಾಡಿದೆ ಎಂದು ಹೇಳಿದಳು. ಈಕೆಗೆ ಸ್ಥಳೀಯ ಯುವಕನೊಬ್ಬನೊಂದಗೆ ಪ್ರಣಯವಿದ್ದು ಆತನ ಪಾತ್ರವೇನಾದರೂ ಇದೆಯೇ ಎಂದು ತನಿಖೆ ನಡೆಸಲಾಗಿತ್ತಿದೆ.