ಜಿರಳೆ ಕಂಡರೆ ಹಲವು ಮಂದಿ ಭಯ ಪಡುತ್ತಾರೆ. ಮಹಿಳೆಯರಂತೂ ಎಷ್ಟೇ ಧೈರ್ಯಶಾಲಿ, ಕೋಪಿಷ್ಟೆಯಾದರೂ ಜಿರಳೆ ಕಂಡರೆ ಒಮ್ಮೆಗೆ ನಿಂತು ಬಿಡುತ್ತಾರೆ..
ಇದೀಗ ಜಿರಳೆ ಚಾಲೆಂಜ್ ಎಂಬ ವಿಚಿತ್ರ ಕಾನ್ಸೆಪ್ಟ್ ಸೋಶಿಯಲ್ ಮಿಡಿಯಾದಲ್ಲಿ ಶುರುವಾಗಿದೆ. ಏನೋನೋ ಚಾಲೆಂಜ್ ಮಾಡುತ್ತಿರುವ ಯುವ ಪೀಳಿಗೆ ಕಾಕ್ರೋಚ್ ಚಾಲೆಂಜ್ ಶುರು ಮಾಡಿದೆ.
ಅಂದರೆ ಜಿರಳೆಯನ್ನ ಮುಖದ ಮೇಲೆ ಹಾಕಿ ಫೇಸ್‌ಬುಕ್ ನಲ್ಲಿ ಸೆಲ್ಫಿ ಫೋಟೋ ಶೇರ್ ಮಾಡುತ್ತಿದ್ದಾರೆ
ಮೊದಲು ಫೇಸ್‍ಬುಕ್‍ನಲ್ಲಿ ಅಲೆಕ್ಸ್ ಅಂಗ್ ಎಂಬಾತ ಈ ಚಾಲೆಂಜ್ ಶುರುಮಾಡಿದ್ದು, ಈಗ ಸಕತ್ ವೈರಲ್ ಆಗಿದೆ.
ಪ್ರಾರಂಭದಲ್ಲಿ ಅಲೆಕ್ಸ್ ತನ್ನ ಫೋಟೋ ಶೇರ್ ಮಾಡಿ ಹೀಗೆ ಮಾಡಲು ನಿಮಗೆ ಸಾಧ್ಯವೇ ಎಂದು ಕೇಳಿದ್ದಾನೆ.
ಈತನ ಚಾಲೆಂಜ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ಸಾವಿರಾರು ಮಂದಿ ಇದನ್ನು ಶೇರ್ ಮಾಡಿದ್ದಾರೆ. ಅಂತೂ ಇಂತಹ ವಿಚಿತ್ರ ಚಾಲೆಂಜ್ ಮಾಡುವುದಕ್ಕಿಂತ ಯಾವುದಾದರೂ ಸಕಾರಾತ್ಮಕ, ಸಮಾಜ ಮುಖಿ ಚಾಲೆಂಜ್ ಮಾಡುವುದು ಒಳ್ಳೆಯದಲ್ಲವೇ?