ತೆಲಂಗಾಣದ ಸಿರ್ಸಿಲ್ಲ ಜಿಲ್ಲೆಯ ಜಕೂಲಾ ಬಾಬು ಎಂಬಾತ ತನ್ನ ಗಲ್ಫ್ ಜೀವನವನ್ನು ಕೊನೆಗೊಳಿಸಿ ಊರಿಗೆ ಮರಳಿದಾಗ ತನ್ನ ಸಂಪತ್ತನ್ನೆಲ್ಲಾ ಪತ್ನಿ ದೋಚಿ ಪ್ರಿಯಕರನ ಜೊತೆ ಪರಾರಿಯಾದ ವಿವರ ತಿಳಿದು ಬಂದಿದೆ.

ನಿನ್ನೆ ಪೋಲೀಸರಿಂದ ಬಂಧಿತನಾದ ನಕ್ಸಲೈಟ್ ನಾಯಕ ಜಕೂಲ ಬಾಬು ತಾನು ನಕ್ಸಲೈಟ್ ಆಗಿ ಪ್ರತೀಕಾರದ ವಾಂಛೆ ತೀರಿಸುವ ಕತೆಯನ್ನು ಈ ರೀತಿ ವಿವರಿಸುತ್ತಾನೆ, ನನಗೆ ಪತ್ನಿಯಿಂದ ಆದ ದ್ರೋಹಕ್ಕೆ ಪ್ರತೀಕಾರವೆಸಗಲು ಈ ಸಂಘಟನೆಗೆ ಸೇರಿದೆನೆಂದು ಪೋಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.

ಸಿಪಿಐಎಂಎಲ್ ಜನಶಕ್ತಿ ಎಂಬ ನಕ್ಸಲೈಟ್ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿ ಸೆರೆಯಾಗಿರುವ ಈತ ದುಬೈಯಲ್ಲಿ ಉದ್ಯೋಗದಲ್ಲಿದ್ದ. 2016ರಲ್ಲಿ ನಕ್ಸಲೈಟ್ ಜೊತೆ ಗುರುತಿಸಿಕೊಂಡಿದ್ದ.

Leave a Reply