Photo credit @ financialexpress

ಮುಂಬೈ: ಟೆಲಿಕಾಂನಲ್ಲಿ ಈ ಆರ್ಥಿಕ ವರ್ಷದಲ್ಲಿ ಸಿಬ್ಬಂದಿಗಳ ಮೇಲೆ ಭಾರೀ ಪ್ರಹಾರವಾಗುವ ಸಾಧ್ಯತೆಯಿದೆ ಎಂದು ಟೀಲಿಂಸ್ ಸರ್ವಿಸ್ ಎಂಬ ಸಂಸ್ಥೆ ತಿಳಿಸಿದ್ದು ಸದ್ರಿ ಸಂಸ್ಥೆ ಟೆಲಿಕಾಂಗೆ ಉದ್ಯೋಗಿಗಳನ್ನು ಒದಗಿಸುತ್ತಿದೆ. ಟೆಲಿಕಾಂ ಕ್ಷೇತ್ರದಲ್ಲಿ ಸಂಭಾವ್ಯ ವಿಲೀನ ಪ್ರಕ್ರಿಯೆ ನಡೆದರೆ ಸದ್ರಿ ಆರ್ಥಿಕ ವರ್ಷದ ಕೊನೆಗಾಗುವಾಗ 65,000 – 90,000 ಮಂದಿ ಕೆಲಸ ರಹಿತರಾಗಲಿದ್ದಾರೆ.

ಟೀಲಿಂಸ್ ಯಾವೆಲ್ಲ ಕ್ಷೇತ್ರದಲ್ಲಿ ಉದ್ಯೋಗಿಗಳು ಕೆಲಸ ಕಳಕೊಳ್ಳಲಿದ್ದಾರೆ ಎಂದು ವಿವರಿಸಿದ್ದು,ಫೋರ್ಸಿಂಗ್ ಆಪರೇಟರ್ಸ್, ಇನ್ಸ್‍ಪ್ರಾಕ್ಚರ್ ಪ್ರೊವೈಡಸ್, ಟವರ್ ಕಂಪೆನಿಗಳು, ರಿಟೇಲ್ ಯುನಿಟ್‍ಗಳಲ್ಲಿ ಉದ್ಯೋಗ ಕಳಕೊಳ್ಳುವ ಭೀತಿಯಿದೆ. ಆದರೆ ಇದೇ ವೇಳೆ ಇನ್ನೊಂದು ರೀತಿಯಲ್ಲಿ ಪ್ರಯೋಜನ ಕೂಡಾ ಆಗಲಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ ಉದ್ಯೋಗವಕಾಶ ನಿರ್ಮಾಣವಾಗಲಿದ್ದು, ಕೆಲವರಿಗೆ ಈ ಕ್ಷೇತ್ರದಲ್ಲಿ ಕೆಲಸ ದೊರಕಬಹುದು.

ಇದೇ ವೇಳೆ ಗ್ರಾಹಕರಿಗೆ ಸಹಾಯಕರು, ಹಣಕಾಸು ವ್ಯವಹಾರ ವಿಭಾಗದಲ್ಲಿ ಉದ್ಯೋಗದಲ್ಲಿರುವವರಿಗೆ ಸಂಚಕಾರ ಎದುರಾಗಲಿದೆ. ಇಲ್ಲಿ ಬಹಳಷ್ಟು ಉದ್ಯೋಗ ನಷ್ಟವಾಗಲಿದೆ ಎಂದು ಟೀಲಿಂಸ್ ಸರ್ವಿಸ್ ಹೇಳಿದೆ. .ಈಗ ಈ ಎರಡು ಕ್ಷೇತ್ರಗಳಲ್ಲಿ 8,000 ಮತ್ತು 7,000 ಜನರು ನಿರುದ್ಯೋಗಿಗಳಾಗುವ ಭೀತಿಯಿದ್ದು ಟೆಲಿಕಾಂನಲ್ಲಿ ಈಗ ಸುಮಾರು 25 ಲಕ್ಷದಷ್ಟು ಜನರು ಸೇವೆ ಸಲ್ಲಿಸುತ್ತಿದ್ದಾರೆ.

Leave a Reply