ಇದು ನಮ್ಮ ಊರು: ಕೋವಿಡ್ -19 ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಖ್ಯಾತ ತೆಲುಗು ಚಿತ್ರ ನಟ ಅಲ್ಲು ಅರ್ಜುನ್ ಹಾಗೂ ಅವರ ಮುಂಬರುವ ‘ಪುಷ್ಪಾ’ ಚಿತ್ರ ತಂಡದ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಕೋವಿಡ್ -19 ನಿಯಮಗಳಿಗೆ ವಿರುದ್ಧವಾಗಿ ಸಾಂಕ್ರಾಮಿಕ ರೋಗದಿಂದ ಸರ್ಕಾರವು ಮುಚ್ಚಿದ ಕುಂತಲಾ ಜಲಪಾತಕ್ಕೆ ಭೇಟಿ ನೀಡಿದ್ದಕ್ಕಾಗಿ ಅಲ್ಲು ಅರ್ಜುನ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ‘ಸಮಾಚಾರ ಹಕ್ಕು ಸಾಧನಾ ಶ್ರವಂತಿ’ ಪ್ರತಿನಿಧಿಗಳು ಆದಿಲಾಬಾದ್ ಜಿಲ್ಲಾ ನೆರಾಡಿಗೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತೆಲಂಗಾಣ-ಮಹಾರಾಷ್ಟ್ರ ಗಡಿಯಲ್ಲಿರುವ ತಿಪೇಶ್ವರ ವನ್ಯಜೀವಿ ಅಭಯಾರಣ್ಯದಲ್ಲಿ ಅಲ್ಲು ಅರ್ಜುನ್ ಅವರ ಪುಷ್ಪಾ ಚಿತ್ರ ತಂಡ ಸಿನಿಮಾ ಚಿತ್ರೀಕರಣ ನಡೆಸಿದೆ ಎಂದು ಎಸ್‌ಎಚ್‌ಎಸ್‌ಎಸ್ ಪ್ರತಿನಿಧಿಗಳು ಆರೋಪಿಸಿದ್ದಾರೆ.

Leave a Reply