ಇತ್ತೀಚಿಗೆ ಪ್ರಳಯಭಾದಿತ ಕೇರಳದಲ್ಲಾದ ನಷ್ಟ ನಲ್ವತ್ತು ಸಾವಿರ ಕೋಟಿ ಎಂದು ಅಂದಾಜಿಸಾಲಾಗಿದೆ. ಈ ಮಧ್ಯೆ ಪ್ರಳಯ ಬಾಧಿತ ಕೇರಳವನ್ನು ಪುನರ್ನಿರ್ಮಿಸಲು ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿರುವ ಚಿನ್ನಗಳನ್ನು ಉಪಯೋಗಿಸಬಹುದೆಂದು ಬಿಜೆಪಿ ಸಂಸದ ಉದಿತ್ ರಾಜ್ ಹೇಳಿದ್ದಾರೆ.

ಕೇರಳದ ಪ್ರಮುಖ ದೇವಸ್ಥಾನಗಳಾದ ಪದ್ಮನಾಭ ಸ್ವಾಮೀ ದೇವಾಲಯ, ಶಬರಿಮಲೆ, ಗುರುವಾಯೂರು ಮುಂತಾದ ಕಡೆಯಿರುವ ಸ್ವರ್ಣಗಳ ಮೌಲ್ಯವು ಲಕ್ಷ ಕೋಟಿಗಿಂತಲೂ ಅಧಿಕವಾಗಿದೆ. ಇದನ್ನು ಹೊಸ ಕೇರಳದ ಪುನರ್ ನಿರ್ಮಾಣಕ್ಕೆ ಬಳಸಬೇಕು. ಜನರು ಅಳುತ್ತಾ ರೋಧಿಸುತ್ತಿರುವಾಗ ಈ ಸಂಪತ್ತಿನಿಂದ ಬೇರೆ ಏನಾದರೂ ಪ್ರಯೋಜನವಿದೆಯೇ ಎಂದು ಉದಿತ್ ರಾಜ್ ಟ್ವೀಟ್ ಮಾಡಿದ್ದಾರೆ. ಇವರು ದೆಹಲಿಯ ಬಿಜೆಪಿ ಸಂಸದರಾಗಿದ್ದಾರೆ.

Leave a Reply