ಸರ್ಕಲ್ ಇನ್ಸ್ ಪೆಕ್ಟರ್ ಮಹಮ್ಮದ್ ಸಲೀಂ ಅಬ್ಬಾಸ್

ದೇವಸ್ಥಾನಗಳಲ್ಲಿ ಕಳವು ಮಾಡುತ್ತಿದ್ದ ಕಳ್ಳರನ್ನು ಪೊಲೀಸ್ ತಂಡವು ಬಲೆಗೆ ಹಾಕಿದೆ. ಸಲೀಂ ಅಬ್ಬಾಸ್ ನೇತೃತ್ವದ ಪೊಲೀಸ್ ತಂಡದ ಈ ಸಾಧನೆಯು ಪ್ರಶಂಸೆಗೆ ಪಾತ್ರವಾಗಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಮಲ್ಲೇನ ಹಳ್ಳಿಯ ದೇವೀರಮ್ಮ ದೇಗುಲ, ತೇಗೂರಿನ ಆಂಜನೇಯ ಸ್ವಾಮಿ ದೇಗುಲ, ಕಳಸಾಪುರದ ರಂಗನಾಥ ಸ್ವಾಮಿ ದೇಗುಲಗಳಲ್ಲಿ ಕಳವು, ಕೆ.ಎಂ ದೊಡ್ಡಿ, ಕೋಡಿಹಳ್ಳಿ, ದಾಬಸ್ ಪೇಟೆ, ಹಲಗೂರು, ಸರಗೂರು, ಸಾತನೂರು ಮುಂತಾದೆಡೆಗಳಲ್ಲಿ ಕಳ್ಳತನ ನಡೆಸುತ್ತಾ ಇದ್ದ ಕಳ್ಳರ ಗ್ಯಾಂಗನ್ನು ಕೊನೆಗೂ ಗ್ರಾಮಾಂತರ ಪೊಲೀಸ್ ಠಾಣೆಯ ಸಲೀಂ ಅಬ್ಬಾಸ್ ನೇತೃತ್ವದ ತಂಡ ಬಂಧಿಸಿದೆ. ಬಂಧಿತರಿಂದ ಸುಮಾರು 2 ಲಕ್ಷ ರೂ ಹಾಗೂ ಒಂದು ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುಕೃತ್ಯದಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿರುವ ಆರೋಪಿಗಳಾದ ರಾಮನಗರ ಜಿಲ್ಲೆಯ ಶಿವನೇಗೌಡದೊಡ್ಡಿಯ ಕಿರಣ್ ಕುಮಾರ್, ಸಾತನೂರು ಹೋಬಳಿ ದೂಂತೂರಿನ ಅರುಣ, ಕನಕಾಪುರದ ಗೋವಿಂದ, ದೂಂತೂರಿನ ಡಿ.ಎಂ ಕಿರಣ ಹಾಗೂ ನವೀನ್ ಕುಮಾರ್ ಎಂಬ ಆರೋಪಿಗಳನ್ನು ಬಂಧಿಸಿದ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಮಹಮ್ಮದ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಪಿಎಸ್ಐ ಗವಿರಾಜ್, ಯೋಗೀಶ್, ಎಎಸ್ಐ ಸುಕುಮಾರ್, ಸಿಬ್ಬಂದಿ ನಂಜಪ್ಪ, ಪಿ.ಡಿ ಕುಮಾರಪ್ಪಾ, ವಿನಾಯಕ, ಮಧುಸೂಧನ್, ಚಾಲಕ ಪ್ರಸನ್ನ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅಣ್ಣಾಮಲೈಯವರು ಹತ್ತು ಸಾವಿರ ರೂಗಳ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.

“ಪೊಲೀಸ್ ಕೆಲಸ ಸವಾಲಿನ ಕೆಲಸವಾಗಿದೆ. ಇದಕ್ಕಾಗಿ ನಾವು ಬಹಳ ತ್ಯಾಗ ಮಾಡಬೇಕಾಗಿದೆ. ಆದರೆ ಇಂತಹ ಜವಾಬ್ದಾರಿಯಿಂದ, ಜನರ ಸೇವೆಯಿಂದ ನಮ್ಮಗೆ ಸಿಗುವ ಆತ್ಮ ಸಂತೃಪ್ತಿಯೇ ಬೇರೆ. ಅದನ್ನು ಅನುಭವಿಸಿದವರಿಗೆ ಗೊತ್ತು. ಪೊಲೀಸರ ಬಗ್ಗೆ ಸಮಾಜದಲ್ಲಿ ಬಹಳಷ್ಟು ತಪ್ಪು ಭ್ರಮೆ ಇದೆ. ಅದು ನಿಜಕ್ಕೂ ಹೋಗಲಾಡಿಸಬೇಕು” ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

Leave a Reply