ಈಜುಕೊಳದಲ್ಲಿ ಮಗುವಿಗೆ ಸ್ತನಪಾನ ಮಾಡಿಸಿದ ಮಹಿಳೆಯನ್ನು ಹೊರಗೆ ಹೋಗುವಂತೆ ಹೇಳಿದ ಘಟನೆ ಯುಎಸ್ ನಲ್ಲಿ ನಡೆದಿದೆ.
ಟೆಕ್ಸಾಸ್ನ (ಅಮೇರಿಕಾ)ಓರ್ವ ಮಹಿಳೆ ತನ್ನ ಮಗನಿಗೆ ಸಾರ್ವಜನಿಕ ಈಜುಕೊಳದಲ್ಲಿ ಹಾಲುಣಿಸುತ್ತಿದ್ದಾಗ ಅಲ್ಲಿನ ಸಿಬ್ಬಂದಿ ಬಂದು ತರಾಟೆ ಮಾಡಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.
ಮಗುವಿಗೆ ಹಾಲುಣಿಸುತ್ತಿದ್ದ ದೇಹವನ್ನು ಕವರ್ ಮಾಡು ಇಲ್ಲವೇ ಹೊರ ನಡೆ ಎಂದು ಮಹಿಳೆಗೆ ಆತ ಹೇಳಿದ್ದ.
ಸಿಬ್ಬಂದಿಯ ಪ್ರಕಾರ, ಆಕೆ ಮಗುವಿಗೆ ಹಾಲುಣಿಸುತ್ತಿದ್ದಾಗ ಆಕೆಯ ಎದೆ ಸಂಪೂರ್ಣ ತೆರೆದಿತ್ತು, ಇದರಿಂದ ಇತರರಿಗೆ ಮುಜುಗರ ಆಗುವ ಸಾಧ್ಯತೆ ಇದೆ ಎಂದು ಸಿಬ್ಬಂದಿ ಕಾರಣ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹೊರಹೋಗುವಂತೆ ಹೇಳಿದ್ದು ಮಾತ್ರವಲ್ಲ ತನ್ನನ್ನು ನಿಂದಿಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.

Leave a Reply