ಉತ್ತರ ಪ್ರದೇಶ: ಶಿಯ ವಕ್ಫ್ ಬೋರ್ಡಿನ ಅಧ್ಯಕ್ಷ ಸಯ್ಯದ್ ವಸೀಮ್ ರಿಝ್ವಿ ಶುಕ್ರವಾರ ಹೇಳಿಕೆಯೊಂದನ್ನು ನೀಡಿದ್ದು ಅವರು ಭಾರತದ ಜಮೀನಿನಲ್ಲಿ ಬಾಬರಿ ಮಸೀದಿ ಕಟ್ಟಡ ಕಳಂಕವಾಗಿದೆ ಎಂದು ಹೇಳಿದ್ದಾರೆ. ಈ ಕಳಂಕವನ್ನು ಮಸೀದಿ ಎನ್ನುವುದು ಮಹಾ ಪಾಪವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಸೀದಿಯ ತಳಭಾಗವನ್ನು 137 ಕಾರ್ಮಿಕರು ಅಗೆದಿದ್ದರು ಮತ್ತು 52 ಮುಸ್ಲಿಮರ ಅವರಲ್ಲಿದ್ದರು. ಐವತ್ತು ಮಂದಿರ ಇಟ್ಟಿಗೆಗಳ ಕಂಭ ಸಿಕ್ಕಿದೆ. ಮಂದಿರಕ್ಕೆ ಸಂಬಂಧಿಸಿದ 265 ಪ್ರಾಚೀನ ಅವಶೇಷಗಳು ಸಿಕ್ಕಿವೆ. ಈ ಆಧಾರದಲ್ಲಿ ಭಾರತೀಯ ಪುರಾತತ್ವ ವಿಭಾಗ ಬಾಬರಿ ಮಸೀದಿಯ ಕೆಳಗಡೆ ಮಂದಿರ ಇತ್ತು ಎಂದು ನಿರ್ಧಾರಕ್ಕೆ ಬಂದಿದೆ.

ಮಂದಿರವನ್ನು ಒಡೆದು ಅದರ ಪಳೆಯುಳಿಕೆಗಳ ಮೇಲೆ ಕಟ್ಟಲಾಗಿದೆ ಎಂದು ನೇರವಾಗಿ ಇದರಿಂದ ಗೊತ್ತಾಗುತ್ತದೆ. ಇದಕ್ಕೆ ಅವರು ಕೆ.ಕೆ. ಮುಹಮ್ಮದ್‍ರು ಬರೆದ ನಾನು ಭಾರತೀಯನು ಎನ್ನುವ ಪುಸ್ತಕವನ್ನು ಆಧಾರವಾಗಿ ನೀಡಿದ್ದಾರೆ. ಆದ್ದರಿಂದ ಬಾಬರಿ ಕಳಂಕವಾಗಿದೆ ಮತ್ತು ಇದನ್ನು ಮಸೀದಿ ಎನ್ನುವುದು ಇಸ್ಲಾಮೀ ಸಿದ್ಧಾಂತಕ್ಕೆ ವಿರುದ್ಧವಾಗಿದೆ.

ಬಾಬರಿ ಮುಲ್ಲಾಗಳು ತಮ್ಮ ಅಪರಾಧಕ್ಕಾಗಿ ಪಶ್ಚಾತ್ತಾ ಪಡಬೇಕಾಗಿದೆ. ಪ್ರವಾದಿ ಮುಹಮ್ಮದ್‍ರ(ಸ) ಇಸ್ಲಾಮಿನಲ್ಲಿ ವಿಶ್ವಾಸ ಇಡಬೇಕಾಗಿದೆ ಎಂದು ರಿಝ್ವಿ ಹೇಳಿದರು.

ಮಾತುಕತೆಯ ಮೇಜಿನಲ್ಲಿ ಕುಳಿತು ಸೋಲು-ಗೆಲುವಿನ ಕುರಿತು ಚಿಂತಿಸುವ ಬದಲಾಗಿ ರಾಮನ ಹಕ್ಕನ್ನು ಹಿಂದೂಗಳಿಗೆ ಮರಳಿಸಿರಿ. ಒಂದು ಒಳ್ಳೆಯ ಮಸೀದಿಯನ್ನು ಲಕ್ನೊದಲ್ಲಿ ಒಳ್ಳೆಯ ಪೈಸೆಯಿಂದ ಕಟ್ಟಿಸುವ ಕುರಿತು ನಿರ್ಧರಿಸಿರಿ ಎಂದು ರೀಝ್ವಿ ಮಾರ್ಮಿಕವಾಗಿ ಹೇಳಿದರು.

Leave a Reply