ಶ್ರೀಲಂಕ: ಸಾಮಾಜಿಕ ಮಾಧ್ಯಮಗಳಲ್ಲಿ ಓರ್ವ ಫೋಟೊಗ್ರಾಫರ್ ಚಿತ್ರಿಸಿದ ಮೊಸಳೆ ಮತ್ತು ಹಾವಿನ ಜಗಳ ಚಿತ್ರವು ವೇಗವಾಗಿ ವೈರಲ್ ಆಗುತ್ತಿದೆ.ಈ ಫೋಟೊಗಳಿಂದ ಈ ಯುದ್ದ ಎಷ್ಟು ಭೀಕರವಾಗಿತ್ತು ಎನ್ನುವುದು ಮನವರಿಕೆಯಾಗುತ್ತದೆ. ವಾಸ್ತವದಲ್ಲಿ ಆಸ್ಟ್ರೇಲಿಯದಿಂದಲೂ ಒಂದು ಅಪಾಯಕಾರಿ ವೀಡಿಯೊ ಬಹಿರಂಗವಾಗಿದೆ. ಇದರಲ್ಲಿ ಐದು ಗಂಟೆಗಳವರೆಗೆ ಹಾವು ಮತ್ತು ಮೊಸಳೆ ಪರಸ್ಪರ ಹೋರಾಡುತ್ತಿವೆ. ಅಂದು ವೀಡಿಯೊ ಸಮಾಜಿಕ ಮಾಧ್ಯಮಗಳಲ್ಲಿ ತೀವ್ರ ವೈರಲ್ ಆಗಿತ್ತು. ಆಸ್ಪ್ರೇಲಿಯದ ಕ್ವಿನ್ಸ್‍ಲೆಂಡ್‍ನಲ್ಲಿ ನಡೆದ ಹಾವು ಮತ್ತು ಮೊಸಳೆಯ ಯುದ್ಧದಲ್ಲಿ ಹಾವು ಗೆದ್ದಿತ್ತು. ಮಾತ್ರವಲ್ಲ ಹಾವು ಮೊಸಳೆಯನ್ನು ನುಂಗಿತ್ತು.
ಆದರೆ ಇಲ್ಲಿರುವ ಈ ಫೋಟೊಗಳು ಮಾತ್ರ ಶ್ರೀಲಂಕಾದ ನ್ಯಾಶನಲ್ ಪಾರ್ಕಿನದ್ದಾಗಿದೆ. ಶ್ರೀಲಂಕಾದ ಫೊಟೊಗ್ರಾಫರ್ ಡಾ. ಋಷಾನಿ ಗನಸಿಂಘೆ ಯಾಲ ನ್ಯಾಶನಲ್ ಪಾರ್ಕಿನಲ್ಲಿ ಹಾವು ಮತ್ತು ಮೊಸಳೆಯ ಕಾದಾಟದ ದೃಶ್ಯಗಳು. ಈ ದೃಶ್ಯ ಬಹಳ ಆಕರ್ಷಕವಾಗಿತ್ತು. ಹತ್ತಿರದಿಂದ ಕ್ಯಾಪ್ಚರ್ ಮಾಡಲು ಬಯಸುತ್ತಿದ್ದೆ. ಆದರೆನನ್ನ ತಂಡ ಅಲ್ಲಿಗೆ ಹೋಗಲು ಬಿಡಲಿಲ್ಲ ಎಂದು ಫೋಟೊಗ್ರಾಫರ್ ತಿಳಿಸಿದ್ದಾರೆ. ಸಮುದ್ರದಲ್ಲಿ ತನ್ನ ದವಡೆಗಳಲ್ಲಿ ಹಾವನ್ನು ಕಚ್ಚಿ ಹಾಕಿ ಮೊಸಳೆ ಜೀವಚ್ಛವ ಮಾಡಿತ್ತು.