ಮಾನವೀಯತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎನ್ನುದಕ್ಕೆ ಸಮಾಜದಲ್ಲಿ ಆಗಾಗ ನಡೆಯುವ ಘಟನೆಗಳೇ ಸಾಕ್ಷಿ.
ತಮಿಳುನಾಡು ರಾಜ್ಯ ರಸ್ತೆ ಸಾರಿಗೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯೋರ್ವ ಮರಣ ಹೊಂದುತ್ತಾನೆ. ಆದರೆ ಕಂಡಕ್ಟರ್ ಸ್ನೇಹಿತನ ಜತೆಗೆ ಶವವನ್ನು ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಇಳಿಸಿ ತೆರಳಿದ ಅಮಾನವೀಯ ಘಟನೆ ವರದಿಯಾಗಿದೆ.

43 ವರ್ಷದ ರಾಧಾ ಕೃಷ್ಣನ್ ಮತ್ತು ಅವರ ಸ್ನೇಹಿತ 54 ವರ್ಷದ ವೀರನ್ ಎಂಬುವರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದು, ಮಾರ್ಗ ಮಧ್ಯೆ ವೀರನ್ ಎಂಬುವರು ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಶವದ ಪಕ್ಕದಲ್ಲಿ ರಾಧಾ ಕೃಷ್ಣನ್ ಕುಳಿತಿದ್ದು ಇದನ್ನು ಕಂಡು ಮಾಧ್ಯಮದವರು ಪ್ರಶ್ನಿಸಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿರುವ ಇವರು ತಮಿಳುನಾಡಿನ ತಿರುವಣ್ಣಮಲೈಗೆ ರಾಜ್ಯ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದರು.

ಬೆಂಗಳೂರಿನಿಂದ ತಿರುವಣ್ಣಮಲೈಗೆ ನಾವು ತಲಾ 150 ರುಪಾಯಿ ಕೊಟ್ಟು ಬಸ್ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದೆವು. ಬಸ್ ನಿಂದ ನಮ್ಮನ್ನು ಕೆಳಗಿಳಿಸುವಾಗ ನಮ್ಮ ಹಣವನ್ನು ವಾಪಸ್ ಕೊಡುವಂತೆ ನಾನು ಕಂಡಕ್ಟರ್ ನಲ್ಲಿ ಪದೇ ಪದೇ ವಿನಂತಿಸಿದೆವು. ಆದರೆ ಆತ ಹಣ ಕೊಡಲಿಲ್ಲ. ಆದ್ದರಿಂದ ನಾನು ಇಲ್ಲಿ ಕುಳಿತು ಯಾವುದಾದರೂ ಆ್ಯಂಬುಲೆನ್ಸ್ ಬರುತ್ತದೆಯೇ ಎಂದು ಕಾದು ನೋಡುತ್ತಿದ್ದೇನೆ ಎಂದು ದುಃಖ ಭರಿತವಾಗಿ ರಾಧಾ ಕೃಷ್ಣನ್ ಹೇಳಿದ್ದಾರೆ.
ಸರಕಾರಿ ಬಸ್ಸುಗಳಲ್ಲಿ ಇಂತಹ ಘಟನೆ ನಡೆದಿರುವುದು ನಿಜಕ್ಕೂ ಶೇಮ್ ಆಗಿದೆ. ಸಂಬಂಧ ಪಟ್ಟವರು ಕಂಡಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ

Leave a Reply