ಮೀರತ್: ಇದು ಸಂಜು ಎಂಬ ಯುವತಿಯ ಜೀವನದ ಯಶೋಗಾಥೆ. ಈಕೆಗೆ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲವಿತ್ತು. ಆದರೆ ಮನೆಯವರು ಆಕೆಯನ್ನು ಮಾಡುವೆ ಮಾಡಿ ಕೊಡುವ ಯೋಚನೆಯಲ್ಲಿದ್ದರು. ಇದನ್ನು ಧಿಕ್ಕರಿಸಿ ಆಕೆ ಮನೆ ಬಿಟ್ಟು ತನ್ನ ಸಾಧನೆಯ ಹಿಂದೆ ಸಾಗಿ ಇಂದು ಯಶಸ್ವಿಯಾಗಿದ್ದಾರೆ. ಸಂಜು 2013 ರಲ್ಲಿ ಮನೆ ತೊರೆದರು. ಮನೆಯಿಂದ ದೂರ ಉಳಿದು 2017 ರಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಆರಂಭಿಸಿದರು. ಏಳು ವರ್ಷಗಳ ನಂತರ ಅವಳ ಹೋರಾಟವು ಫಲ ನೀಡಿತು ಮತ್ತು ಆಕೆ ತನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಪಿಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಇದೀಗ ಅಧಿಕಾರಿಯಾಗಿದ್ದಾರೆ.

ಮೀರತ್‌ನವರಾದ ಸಂಜು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡದ ಕುಟುಂಬದಲ್ಲಿ ಜನಿಸಿದ್ದರು. ಕುಟುಂಬದ ಈ ಆಲೋಚನೆಯಿಂದಾಗಿ ಸಂಜು ಅವರ ಅಕ್ಕ ಇಂಟರ್ ಅನ್ನು ಮುಗಿಸಿದ ತಕ್ಷಣ ವಿವಾಹ ಆಗಬೇಕಾಯಿತು. ಸಂಜು ಕೂಡ ಇಂಟರ್ ಮುಗಿಸಿದ ತಕ್ಷಣ ಮನೆಯವರು ಸಂಜುವನ್ನು ಮುಂದೆ ಓದಲು ನಿರಾಕರಿಸಿ ಮದುವೆ ಮಾಡಿ ಕೊಡಲು ತೀರ್ಮಾನಿಸಿದ್ದರು.

ಪಿಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂಜು ಈಗ ಐಎಎಸ್‌ಗೆ ತಯಾರಿ ನಡೆಸುತ್ತಿದ್ದು, ಅವರು ಒಂದು ದಿನ ಜಿಲ್ಲಾ ಕಲೆಕ್ಟರ್ ಆಗಿ ಮೀರತ್‌ಗೆ ಬರಬೇಕೆಂಬ ಆಸೆಯನ್ನು ಹೊತ್ತಿದ್ದಾರೆ. ಇದೇ ಸಮಯದಲ್ಲಿ ಸಂಜು ಅವರ ಯಶಸ್ಸು ಆ ಸಮಾಜದ ಚಿಂತನೆಯ ಸೋಲು ಎಂದು ಸಂಜು ಅವರ ಗುರು ಅಭಿಷೇಕ್ ಶರ್ಮಾ ಹೇಳುತ್ತಾರೆ. ಗುಡ್ ಲಕ್ ಸಂಜು.

Leave a Reply