ಕೇರಳ: ಅದ್ದೂರಿ ಕಾರಿನಲ್ಲಿ ಸುತ್ತಾಡುತ್ತಾ ರೈತರ ಬೆಳೆಗಳನ್ನು ಕದಿಯುವ ಹೈಫೈ ಕಳ್ಳನನ್ನು ತಿರುವಂಬಾಡಿ ಪೊಲೀಸರು ಬಂಧಿಸಿದ್ದಾರೆ. ತಿರುವಂಬಾಡಿಯ ಮರಕಾಟ್ಟುಪುರಂ ಎಂಬಲ್ಲಿನ ಸುನೀಲ್‍ ದುಬಾರಿ ಕಾರಿನಲ್ಲಿ ಸುತ್ತಾಡುವ ರಬರ್ ಕಳ್ಳ ಆಗಿದ್ದಾನೆ. ಕಳ್ಳತನಕ್ಕಾಗಿ ಅವನು ಟವೇರ ಕಾರನ್ನು ಬಳಸುತ್ತಾನೆ ಎಂದು ಪೊಲೀಸರು ತಿಳಿಸಿದ್ದು,ಕಾರನ್ನು ವಶಪಡಿಸಿಕೊಂಡಿದ್ದಾರೆ.

ತಿರುವಂಬಾಡಿ ಠಾಣೆಯ ಅಡಿಷನಲ್ ಎಸೈ ಸದಾನಂದರ ನೇತೃತ್ವದ ಪೊಲೀಸರ ತಂಡ ರಾತ್ರೆ ಪೆಟ್ರೋಲಿಂಗ್ ನಡೆಸುತ್ತಿದ್ದಾಗ ಈತ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದಿದ್ದಾನೆ.ಬೆಳಗ್ಗೆ ಒಂದೂವರೆ ಗಂಟೆಗೆತಿರುವಂಬಾಡಿ ಪುನ್ನಕ್ಕಳ್ ರಸ್ತೆಯಲ್ಲಿಕಂಡು ಬಂದಿದ್ದ ಕೆಎಲ್ 51ಎ 1075 ಟವೇರ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಆರು ಗೋಣಿ ಕೋರ ಅಡಿಕೆ ಕಂಡು ಬಂತು. ಈತನನ್ನು ವಿಚಾರಿಸಿದಾಗ ಪರಸ್ಪರ ತದ್ವಿರುದ್ಧ ಹೇಳಿಕೆ ನೀಡಿದ್ದನು. ನಂತರ ಠಾಣೆಗೊಯ್ದು ಸ್ವಲ್ಪ ಗಟ್ಟಿಯಾಗಿ ವಿಚಾರಿಸಿದಾಗ ರಬರ್, ಅಡಿಕೆ ಕಳ್ಳತನ ಮಾಡುತ್ತಿದ್ದ ಕತೆ ಬಹಿರಂಗವಾಗಿದೆ.

ಮಾವೂರ್ ನಿಂದ 500 ರಬರ್ ಸೀಟ್ ಕಳ್ಳತನದಲ್ಲಿ ಈತನ ವಿರುದ್ಧ ಪ್ರಕರಣ ದಾಖಲುಗೊಂಡಿದೆ. ತಾಮರಶ್ಶೇರಿ ಕೋರ್ಟಿಗೆ ಆರೋಪಿಯನ್ನು ಹಾಜರು ಪಡಿಸಲಾಗಿದ್ದು ಹದಿನಾಲ್ಕು ದಿವಸ ರಿಮಾಂಡ್ ವಿಧಿಸಲಾಗಿದೆ.

Leave a Reply