• ಕಡಿಮೆ ಪ್ರಮಾಣದಲ್ಲಿ ನೀರಿನ ಸೇವನೆ
• ವ್ಯಾಯಾಮ ರಹಿತ ಜೀವನಶೈಲಿ
• ನಾರಿನ ಅಂಶವುಳ್ಳ ಆಹಾರವನ್ನು ಸೇವಿಸದೇ ಇರುವುದು ಆಹಾರವನ್ನು ಅಗಿಯದೇ, ಅವಸರದಿಂದ ತಿನ್ನುವುದು
• ಚಹಾ, ಕಾಫಿ, ಸಿಗರೇಟ್, ಕೋಲಾದಂತಹ ಪೇಯಗಳ ಅತಿಯಾದ ಸೇವನೆ
• ಹಿಟ್ಟಿನ ಆಹಾರಗಳನ್ನು (ಉದಾ : ದೋಸೆ, ಪೂರಿ, ಪರೋಟಾ ಇತ್ಯಾದಿ) ಅತಿಯಾಗಿ ಸೇವಿಸುವುದು
• ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು, ಹುರಿದ ಪದಾಥ ‘ಗಳನ್ನು ಹೆಚ್ಚು ಸೇವಿಸುವುದು”
• ಮಾನಸಿಕ ಒತ್ತಡ, ದೇಹದಲ್ಲಿ ಥೈರಾಯ್ಡ್ಮತ್ತು ಪಿಚ್ಯುಟರಿ ಸ್ರಾವಗಳ ಕೊರತೆ
• ದೊಡ್ಡ ಕರುಳಿನ ಕಾಯಿಲೆಗಳು, ಸಕ್ಕರೆ ಕಾಯಿಲೆ, ಥೈರಾಕ್ಸಿನ್ ಕೊರತೆ, ಖಿನ್ನತೆ ಇತ್ಯಾದಿಗಳಿಂದಲೂ ಮಲಬದ್ಧತೆ ಕಾಣಿಸಿಕೊಳ್ಳಬಹುದು

• ಖಿನ್ನತೆ ನಿವಾರಕ ಔಷಧಿಗಳು, ಅಲರ್ಜಿ ನಿವಾರಕಗಳು, ಅಧಿಕ ರಕ್ತದೊತ್ತಡವನ್ನು ತಗ್ಗಿಸುವ ಮಾತ್ರೆಗಳು, ಪ್ರಬಲ ರೇಚಕಗಳು ಕಾಲಕ್ರಮೇಣ ಮಲಬದ್ದತೆಯನ್ನುಂಟು ಮಾಡುತ್ತದೆ.
• ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವವರಲ್ಲಿ ಇದರ ಉಪಟಳ ಹೆಚ್ಚು
• ಗರ್ಭಿಣಿಯರಲ್ಲಿ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕೂಸು ಕರುಳುಗಳ ಮೇಲೆ ಒತ್ತಡ ಹಾಕುವುದರಿಂದಾಗಿ ಮಲಬದ್ಧತೆ ಕಾಣಿಸಿಕೊಳ್ಳುವುದು,
• ದೀರ್ಘಕಾಲ ಭೇದಿ ಮಾತ್ರೆಗಳನ್ನು ಸೇವಿಸುವವರಲ್ಲಿ ಕರುಳು ಮತ್ತು ಗುದನಾಳದ ಸ್ನಾಯುಗಳು ದುರ್ಬಲವಾಗಿ ನುಸಿ ಹೋಗಿರುತ್ತದೆ.
• ಒಳಪದರು ಗಟ್ಟಿಯಾಗಿ ನಾರು ಮತ್ತು ಹೆಚ್ಚಿರುತ್ತದೆ. ಆದ್ದರಿಂದ ನೋವು ನಿವಾರಕಗಳು, ಆಂಟಾಸಿಡೆಗಳು, ಹೆಚ್ಚು ಮೂತ್ರ ವಿಸರ್ಜನೆಗಾಗಿ ಸೇವಿಸುವ ಔಷಧಿ ಇತ್ಯಾದಿಗಳನ್ನು ವೈದ್ಯರ ಮಾರ್ಗದರ್ಶನವಿಲ್ಲದೇ ದೀರ್ಘಕಾಲ ಸೇವಿಸಬಾರದು.

ನಿವಾರಣೋಪಾಯಗಳು

• ಸೂಕ್ತ ಆಹಾರವನ್ನು ಸೇವಿಸಿ ನೈಸರ್ಗಿಕ ವಿಧಾನದಲ್ಲಿ ಮಲವು ಹೊರಬೀಳುವಂತೆ ಮಾಡುವುದೇ ಉತ್ತಮ ಮಾರ್ಗ,
• ಸತ್ವಯುತ ಸಮತೋಲನ ಆಹಾರ ಸೇವಿಸುವುದು ಒಳ್ಳೆಯದು.
• ದಿನಕ್ಕೆ 50ರಿಂದ 60 ಗ್ರಾಂ.ನಷ್ಟು ನಾರಿನಂಶವಿರುವ ತರಕಾರಿ ಮತ್ತು ಹಣ್ಣು ಹಂಪಲುಗಳ ಸೇವನೆ ಮಾಡಬೇಕು .
• ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬಿಸಿನೀರಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಹಿಂಡಿ ಕುಡಿಯಬೇಕು. ಒಂದೆರಡು ಗಂಟೆ ಏನನ್ನೂ ಸೇವಿಸಬಾರದು.
• ಬೇಲದಹಣ್ಣು, ಬಾಳೆಹಣ್ಣು, ಖರ್ಜೂರ, ಅತ್ತಿಹಣ್ಣು, ಪೇರಲಹಣ್ಣು ಮುಂತಾದವು ಸರಾಗವಾಗಿ ಮಲವನ್ನು ಹೊರಹಾಕುವಲ್ಲಿ ಸಹಕರಿಸುತ್ತವೆ.
• ಹೆಚ್ಚಿನ ನೀರನ್ನು ಕುಡಿಯಬೇಕಾದದ್ದು ಎಲ್ಲಾ ರೀತಿಯಿಂದಲೂ ಉತ್ತಮ ಮಾರ್ಗ, ಆ ಮಲಬದ್ಧತೆಯಿಂದ ಪಾರಾಗಲು ನಿಯಮಿತ ವ್ಯಾಯಾಮದ ಅತ್ಯಗತ್ಯವೂ ಇದೆ. ಅದರಲ್ಲಿ ಕಿಬ್ಬೊಟ್ಟೆಗೆ ಸಂಬಂಧಿಸಿದ ವ್ಯಾಯಾಮ ಇಲ್ಲಿ ಸಹಕಾರಿ.

 

Leave a Reply