ಶಾಲಾ ಮಕ್ಕಳು ಐಟಿ ಕಂಪೆನಿ ನಡೆಸುತ್ತಿದ್ದಾರೆ ಎಂದು ಯಾರಾದರೂ ಹೇಳಿದರೆ ನೀವು ನಂಬುವಿರೇ? ಹಾಗಾದರೆ ಕೇರಳದ ವಿದ್ಯಾರ್ಥಿಗಳು ತಮ್ಮದೇ ಆದ ಒಂದು ಐಟಿ ಕಂಪೆನಿ ಪ್ರಾರಂಭಿಸಿದ್ದಾರೆ.

ಕೆ.ವಿ.ಯು.ಪಿ.ಎಸ್ ನ ಶಾಲಾ ಮಕ್ಕಳು ಕೆಲವು ಐಟಿ ತಜ್ಞರ ಸಹಾಯದಿಂದ ಐಟಿ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ.
‘ಗ್ರೋಲಿಯಸ್’ ಅಥವಾ ಗ್ರೋ ಲೈಕ್ ಅಸ್ ಎಂಬ ಹೆಸರಿನ ಈ ಐಟಿ ಫರ್ಮ್ 18 ತಿಂಗಳ ಹಿಂದೆ ಪ್ರಾರಂಭಿಸಲಾಗಿದ್ದು, ಇದು ಐಟಿ ಸಂಸ್ಥೆಯು ಡೊಮೇನ್ , ವೆಬ್ಸೈಟ್ ವಿನ್ಯಾಸ ಮತ್ತು ವೆಬ್ಸೈಟ್ ಡೆವೆಲಪ್ ಮೆಂಟ್ ಮುಂತಾದ ಸೇವೆಗಳನ್ನು ಒದಗಿಸುತ್ತದೆ.

ಈ ಮಕ್ಕಳು ವೆಬ್ಸೈಟ್ಗಳನ್ನು ವಿನ್ಯಾಸಗೊಳಿಸಲು ರೂ. 2,000 ರಿಂದ ರೂ 10,000 ವರೆಗೆ ಚಾರ್ಜ್ ಮಾಡುತ್ತಾರೆ. ಶಾಲೆಗಳು ಮತ್ತು ಕಾಲೇಜುಗಳು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಐಟಿ ಕಾರ್ಯಾಗಾರಗಳನ್ನು ನಡೆಸುತ್ತಾರೆ.

ಮೊದಲಿಗೆ ಐಟಿಗೆ ಸಂಬಂಧಿಸಿದ ಕೃತಿಗಳಲ್ಲಿ ಆಸಕ್ತಿ ಹೊಂದಿದ್ದ ಸುಮಾರು ಎರಡು ಡಜನ್ ವಿದ್ಯಾರ್ಥಿಗಳು ಆಯ್ಕೆ ಮಾಡಿ ಅವರಿಗೆ ಈ ಬಗ್ಗೆ ಎರಡು ವಾರಗಳ ಕಾಲ ತರಬೇತಿ ನೀಡಲಾಯಿತು , ಅಂತಿಮವಾಗಿ 12 ವಿದ್ಯಾರ್ಥಿಗಳು ಈ ಯೋಜನೆಗೆ ಆಯ್ಕೆಯಾದರು. ವಿದ್ಯಾರ್ಥಿಗಳು ಐಟಿ ತಜ್ಞರು ಮತ್ತು ಶಾಲಾ ಅಧಿಕಾರಿಗಳ ನಿರೀಕ್ಷೆಗಳಿಗಿಂತ ವೇಗವಾಗಿ ವಿಷಯಗಳನ್ನು ಮನವರಿಕೆ ಮಾಡಿ ಕಲಿತರು.

ಪ್ರತಿ ದಿನ ವಿದ್ಯಾರ್ಥಿಗಳಿಗೆ ಐಟಿ ಸಂಬಂಧಿಸಿದ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು. ಹೆಚ್ಚಿನ ಐಟಿ ಪದವೀಧರರಿಗೆ ಪ್ರಾಯೋಗಿಕ ಜ್ಞಾನ ಇರುವುದಿಲ್ಲ. ಆದರೆ ಈ ಮಕ್ಕಳು ನಿರೀಕ್ಷೆಗಿಂತ ಹೆಚ್ಚು ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಈ ಯೋಜನೆಯಲ್ಲಿ ಒಬ್ಬರಾದ ಅನಸ್ ಹೇಳುತ್ತಾರೆ.

Leave a Reply