ಹೃದ್ರೋಗವನ್ನು ಪ್ರಚೋದಿಸುವ ಗಂಡಾಂತರ ಅಂಶಗಳು ಹೃದಯದ ವೇಗವನ್ನು ಹೆಚ್ಚಿಸುತ್ತದೆ ಎಂದು ಹಲವು ಅಧ್ಯಯನಗಳು ಹೇಳುತ್ತವೆ. ಅವುಗಳಲ್ಲಿ ಮೂರು ವಿಧಗಳನ್ನು ಗುರುತಿಸಬಹುದು.

1.  ನಾವೇ ತಂದುಕೊಂಡ ಗಂಡಾಂತರದ ವಿಷಯಗಳು; ಅವನ್ನು ನಾವು ತಡೆಹಿಡಿಯಬಹುದು. ಅವುಗಳು ಯಾವುವೆಂದರೆ

ಆತಂಕಭರಿತ ಜೀವನ
ಧೂಮಪಾನ
ಮಾದಕ ವಸ್ತು ಮತ್ತು ಬ್ರಾಂಡಿ ವಿಸ್ಕಿಯ ಸೇವನೆ
ಜಿಡ್ಡು ಪದಾರ್ಥಗಳ ಮಿತಿಮೀರಿದ ಸೇವನೆ
ಆಮ್ಲೀಕರಣ ನಿರೋಧಕಗಳು, ತಾರಕಾರಿಗಳನ್ನು ಸಾಕಷ್ಟು ಬಳಸದಿರುವುದು.
ವ್ಯಾಯಾಮ ರಹಿತ ಆಲಸಿ ಜೀವನ
ತಂಬಾಕು ಸೇವನೆ

2. ತಡೆಹಿಡಿಯಬಹುದಾದ ಅಂಶಗಳು

ಅಧಿಕ ರಕ್ತದೊತ್ತಡ ಅಥವಾ ಬಿಪಿ
ಡಯಾಬಿಟಿಸ್
ಬೊಜ್ಜು
ಹೆಚ್ಚಾದ ದೇಹ ತೂಕ

ಇವುಗಳನ್ನು ನಿವಾರಿಸಲಾಗದು ಆದರೂ ಔಷದೋಪಚಾರದಿಂದ ತಡೆಹಿಡಿದು ಸಾಮಾನ್ಯ ಮಟ್ಟಕೆ ತಂದು ನಿಲ್ಲಿಸಬಹುದು.

3. ನಿವಾರಿಸಲೂ ತಡೆಹಿಡಿಯಲೂ ಆಗದಂತಹ ಅಂಶಗಳು

ವಯಸ್ಸು
ಲಿಂಗ
ವಂಶಗುಣ

Leave a Reply