image indiatimes

ಮತದಾನ ಮಾಡುವುದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಅಸಿಫಾಬಾದ್ ಜಿಲ್ಲೆಯ ಕಾಗಝ್ನಗರ ನಿವಾಸಿ 25 ವರ್ಷದ ಜಕೀರ್ ಪಾಶಾ ಎಲ್ಲರಿಗೂ ಸ್ಫೂರ್ತಿಯಾಗಿದ್ದಾನೆ. ಈತನಿಗೆ ಎರಡೂ ಕೈಗಳಿಲ್ಲ, ಆದರೆ ಏಪ್ರಿಲ್ 11 ರಂದು ಅವರು ಕಾಲುಗಳನ್ನು ಬಳಸಿಕೊಂಡು ಮತ ಚಲಾಯಿಸಿ ಬದ್ಧತೆ ತೋರಿದ್ದಾನೆ ಈ ವಿಕಲ ಚೇತನ ಯುವಕ. ತೆಲಂಗಾಣ, ವಿಶೇಷವಾಗಿ ಹೈದರಾಬಾದ್ ಮತ್ತು ಸಿಕಂದರಾಬಾದ್ನಲ್ಲಿ ಮತದಾನ ಕಡಿಮೆಯಾದರೂ, ಈತ ಮಾತ್ರ ಸಾಮಾಜಿಕ ಜಾಲತಾಣಿಗರ ಮನ ಗೆದ್ದಿದ್ದಾನೆ. ಯಾರದೇ ಸಹಾಯ ಪಡೆಯದೇ ತನ್ನ ಕಾಲನ್ನೆತ್ತಿ ಝಕೀರ್ ಮತದಾನ ಮಾಡಿದಾಗ ಅಲ್ಲಿದ್ದ ಅಧಿಕಾರಿಗಳು ಬೆರಗಾದರು. ಮತದಾನ ನನ್ನ ಹಕ್ಕು ಮತ್ತು ಕರ್ತವ್ಯ ಎಂದು ಈತ ಬಳಿಕ ಮಾಧ್ಯಮದೊಂದಿಗೆ ಹೇಳಿದ್ದಾನೆ.

Leave a Reply