ಯುದ್ಧ ಎಂದರೆ ಎರಡೂ ದೇಶಗಳ ಕ್ರಿಕೆಟ್ ಮ್ಯಾಚ್ ಅಲ್ಲ. ಅದನ್ನು ಅನುಭವಿಸಿದವರಿಗೆ ಅದರ ಪರಿಣಾಮ ಗೊತ್ತು. ಅನಾಥ ಮಕ್ಕಳು, ವಿಧವೆಯರನ್ನು ಸೃಷ್ಟಿ ಮಾಡುವ ಯುದ್ಧ ನಿಜಕ್ಕೂ ಭೀಕರ. ಯಾರಿಗೂ ಬೇಡ.

ಯುದ್ಧದ ಪರಿಣಾಮ ಎಷ್ಟು ಭೀಕರ ಎಂದು ಅದರ ಸಂತ್ರಸ್ತರ ನೋವನ್ನು ನೋಡಿಯೇ ಅರಿಯಬೇಕು. ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ಯುದ್ಧ ದಿಂದಾಗಿ ಕಾಲು ಕಳುಕೊಂಡಿದ್ದ ಪುಟ್ಟ ಬಾಲಕ ತನಗೆ ಕೃತಕ ಕಾಲು ಜೋಡಿಸಿದ ನಂತರ ಖುಷಿಯಿಂದ ಡ್ಯಾನ್ಸ್ ಮಾಡುವ ವೀಡಿಯೋವೊಂದು ವೈರಲ್ ಆಗಿದೆ. ಅಹ್ಮದ್ 8 ತಿಂಗಳ ಪ್ರಾಯದವನಾಗಿದ್ದಾಗ ಯುದ್ಧದ ಸಮಯದಲ್ಲಿ ಸಿಡಿದಿದ್ದ ಗುಂಡಿನ ಚೂರೊಂದು ಮಗುವಿನ ಕಾಲಿನ ಎಲುಬಿಗೆ ತಾಗಿ ಕೊನೆಗೆ ಮಗುವಿನ ಕಾಲೇ ತುಂಡು ಮಾಡಿ ತೆಗೆಯುವಂತಾಗಿತ್ತು. ಅಂದು ಅಹ್ಮದ್ ನ ತಾಯಿ ಅಸಹಾಯಕಳಾಗಿ ಅಳುತ್ತಾ ಸಮೀಪದಲ್ಲೇ ಇದ್ದ ರೆಡ್‌ಕ್ರಾಸ್ ಚಿಕಿತ್ಸಾ ಶಿಬಿರಕ್ಕೆ ಹೊತ್ತೊಯ್ದು ಚಿಕಿತ್ಸೆ ಕೊಡಿಸಿದ್ದರು. .

ಇದೀಗ ಅಹ್ಮದ್ ಗೆ 5 ವರ್ಷ ಪ್ರಾಯ “ಇನ್ನೆಂದೂ ಯುದ್ದ ಸಂಭಂವಿಸಲೇ ಬಾರದು, ನನ್ನ ದೇಶ ಶಾಂತಿಯಿಂದಿರಲಿ ಎಂದು ನಾನು ಬೇಡುತ್ತೇನೆ” ಎಂದು ಹೇಳಿದ್ದಾನೆ.

 

Leave a Reply