ದನದ ಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಮಧ್ಯಪ್ರದೇಶದ ಸಿಯೋನಿಯಲ್ಲಿ ಗೋರಕ್ಷಕರ ತಂಡವೊಂದು ಮಹಿಳೆ ಸಮೇತ ಮೂವರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಪ್ರಕರಣ ವರದಿಯಾಗಿದೆ. ಇಂಡಿಯಾ ಟುಡೆ ವರದಿಯ ಪ್ರಕಾರ ಹಲ್ಲೆ ಕೋರರು ನಮ್ಮನ್ನು ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆ ಆಟೋದಲ್ಲಿ ಸಂಚರಿಸುತ್ತಿದ್ದಾಗ ಗೋರಕ್ಷಕರು ದನದ ಮಾಂಸ ಸಾಗಿಸುತ್ತಿದ್ದಾರೆ ಎಂಬ ಆರೋಪದಲ್ಲಿ ದಾಳಿ ನಡೆಸಿದ್ದಾರೆ. ಘಟನೆ ವೀಡಿಯೋ ಒಂದು ವೈರಲ್ ಆಗಿದ್ದು, ವೀಡಿಯೋದಲ್ಲಿ ಗೋರಕ್ಷಕರು ಯುವಕರಿಬ್ಬರನ್ನು ಒಬ್ಬೊಬ್ಬರನ್ನಾಗಿ ಮರವೊಂದರ ಹತ್ತಿರ ಎಳೆದುಕೊಂಡು ಹೋಗಿ ನಿರ್ದಯವಾಗಿ ಥಳಿಸುತ್ತಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಹಲ್ಲೆ ಮಾಡಿದವರನ್ನು ಬಂಧಿಸಲಾಗಿದೆ. ಈ ಘಟನೆಯ ಬಗ್ಗೆ ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ ಸಂಸದ ಅಸಾದುದ್ದಿನ್ ಓವೈಸಿ ಟ್ವೀಟ್ ಮಾಡಿ, ‘ಮೋದಿಗೆ ಓಟ್ ಹಾಕಿದವರು ಮುಸ್ಲಿಮರೊಂದಿಗೆ ಯಾವ ರೀತಿ ವ್ಯವಹರಿಸುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದೆ ಇದು. ಹೊಸ ಭಾರತಕ್ಕೆ ಸ್ವಾಗತ’ ಎಂದು ಬರೆದಿದ್ದಾರೆ.