ಬಾಲಿವುಡ್ ನ ಬಹು ನಿರೀಕ್ಷಿತ ಸಿನೆಮಾ “ಥಗ್ಸ್ ಆಫ್ ಹಿಂದೂಸ್ತಾನ್” ಚಿತ್ರದ ಟೀಸರ್ ಬಹಳ ಸಂಚಲನಮೂಡಿಸಿದೆ. ಈ ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, 1795 ರ ಅವಧಿಯ ಚಿತ್ರ ಕಥೆಯಾಗಿದೆ ಎಂದು ಟೀಸರ್ ನಲ್ಲಿ ಸುಳಿವು ಸಿಗುತ್ತದೆ. ಈಸ್ಟ್ ಇಂಡಿಯಾ ಮೂಲಕ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ನಂತರ ಆ ಕಂಪೆನಿಯು ಮೆಲ್ಲ ಮೆಲ್ಲನೆ ಭಾರತದಲ್ಲಿ ತನ್ನ ಅಧಿಕಾರವನ್ನು ಚಲಾಯಿಸಲು ತೊಡಗುತ್ತದೆ. ಆದರೆ ಬ್ರಿಟಿಷರ ದಾರಿಗೆ ಕತ್ತಿ ವರೆಸೆ ಪರಿಣಿತ ಆಜಾದ್ (ಅಮಿತಾಬ್ ಬಚ್ಚನ್ ) ಮತ್ತು ಬಿಲ್ಲುಗಾರ್ತಿ ಝಫಿರ (ಫಾತಿಮಾ ಸನ ಶೇಖ್ ) ದುಃಸ್ವಪ್ನ ವಾಗಿ ಪರಿಣಮಿಸುತ್ತಾರೆ. ಈ ಆಜಾದ್ ಮಟ್ಟ ಹಾಕಲು ಬ್ರಿಟಿಷರು ಫಿರಂಗಿಯನ್ನು (ಅಮೀರ್ ಖಾನ್ ) ಹುಡುಕಿ ತರುತ್ತಾರೆ.

ಈ ಹಿಂದೆ ಪೋಸ್ಟರ್ ಬಿಡುಗಡೆ ಮಾಡಿದ ನಂತರ ಅಮೀರ್ ಖಾನ್
“ಶ್ರೀ ಬಚ್ಚನ್ ಅವರೊಡನೆ ಪೋಸ್ಟರ್ ವೊಂದರಲ್ಲಿ ನನ್ನನ್ನು ನೋಡುವುದು ನನ್ನ ಬಹುಕಾಲದ ಕನಸು ಈಗ ನನಸಾಗಿದೆ. ನನಗಿನ್ನೂ ನಂಬಲು ಸಾಧ್ಯ ಆಗುತ್ತಿಲ್ಲ ಎಂದು 53 ವರ್ಷದ ಸೂಪರ್ಸ್ಟಾರ್ ಅಮೀರ್ ಖಾನ್ ಟ್ವೀಟ್ ಮಾಡಿದ್ದಾರೆ. ಇದು ಅಮೀರ್ ಖಾನ್ ಮತ್ತು ಅಮಿತಾಭ್ ಬಚ್ಚನ್ ಜೊತೆಯಾಗಿ ನಟಿಸುತ್ತಿರುವ ಮೊದಲ ಸಿನೆಮಾವಾಗಿದೆ. ಇಬ್ಬರೂ ದಿಗ್ಗಜರು ಒಂದೇ ಸಿನೆಮಾದಲ್ಲಿ ನಟಿಸುತ್ತಿರುವುದು ಸಿನಿ ಪ್ರಿಯರನ್ನು ಇನ್ನಷ್ಟು ರೋಮಾಂಚನಗೊಳಿಸಿದೆ. ಈ ಹಿಂದೆ ಅಮಿತಾಭ್ ಜೊತೆ ಶಾರುಖ್ ಖಾನ್, ಸಲ್ಮಾನ್ ಖಾನ್ ನಟಿಸಿದ್ದರು.

ಟೀಸರ್ ನಲ್ಲಿ ನೃತ್ಯಗಾರ್ತಿ ಕತ್ರಿನಾ ಕೈಫ್, ಜಾನ್ ಕ್ಲೈವ್ ಪಾತ್ರ ಕಾಣಿಸಿಕೊಳ್ಳುತ್ತದೆ. ಈಗಾಗಲೇ ಈ ಟೀಸರ್ 19,575,739 ಜನರು ನೋಡಿದ್ದಾರೆ.

Leave a Reply