ಚಂದ್ರಾಪುರ: ಹುಲಿಯೊಂದು ಸುಮಾರು 35 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಜಿಗಿಯಿತು. ಆದರೆ ಎರಡು ಕಲ್ಲುಗಳ ಮಧ್ಯೆ ಸಿಲುಕಿ, ಹೊರಬರಲು ಸಾಧ್ಯವಾಗದೆ ಅಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ಘಟನೆ ನಡೆದಿದ್ದು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ. ನಗರದಿಂದ ಸುಮಾರು 27 ಕಿಮೀ ದೂರದ ಕುನಾಡಾ ಬಳಿಯ ಸಿರ್ನಾ ನದಿಯ ಸಮೀಪ ಸೇತುವೆಯಿಂದ ನದಿಗೆ ಹುಲಿ ಜಂಪ್ ಮಾಡಿದೆ. ಆದರೆ ಅದು ನೇರವಾಗಿ ನದಿಯಲ್ಲಿರುವ ಕಲ್ಲುಗಳ ಮಧ್ಯ ಬಿದ್ದ ಪರಿಣಾಮ ಬೆನ್ನುಮೂಳೆಗೆ ಗಂಭೀರ ಗಾಯವಾಗಿತ್ತು. ಅರಣ್ಯಾಧಿಕಾರಿಗಳು ಅದನ್ನು ರಕ್ಷಿಸುವ ಪ್ರಯತ್ನ ವಿಫಲವಾಗಿ ಅಲ್ಲಿಯೇ ಮೃತಪಟ್ಟಿದೆ.

ಹುಲಿ ಬಿದ್ದು ಒದ್ದಾಡುತ್ತಿರುವ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಅಲ್ಲಿಗೆ ತೆರಳಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದರು. ಆದರೆ ಬೆಳಕು ಸರಿಯಾಗಿಲ್ಲದ ಕಾರಣ ಸಾಧ್ಯವಾಗಲಿಲ್ಲ. ರಾತ್ರಿಯಿಡೀ ಅವರು ಹುಲಿಯ ಚಲನವಲನ ಗಮನಿಸುತ್ತ ಅಲ್ಲಿಯೇ ಇದ್ದರು.

ಗುರುವಾರ ಬೆಳಗ್ಗೆಯಷ್ಟರಲ್ಲಿ ಹುಲಿ ಮೃತಪಟ್ಟಿತ್ತು. ಅದರ ಮೃತದೇಹವನ್ನು ಕಲ್ಲಿನ ಮಧ್ಯದಿಂದ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here