ಇದು ನಮ್ಮ ಊರು: ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆದ ನಂತರ ಜನರಲ್ಲಿ ಅದರ ಕ್ರೇಜ್ ಕಡಿಮೆಯಾಗಿದೆ. ಆದರೆ ನಮಮ್ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಈ ಚೀನೀ ಅಪ್ಲಿಕೇಶನ್ ನ ಆಟ ಇನ್ನೂ ಮುಂದುವರಿದಿದೆ. ಅಲ್ಲಿನ ಜನರು ಈಗ ಟಿಕ್ ಟಾಕ್ ನಲ್ಲಿ ತಮ್ಮ ಪಾಲೊವರ್ಸ್ ಗಳನ್ನು ಹೆಚ್ಚಿಸಲು ವಿವಿಧ ರೀತಿಯ ತಂತ್ರಗಳನ್ನು ಹೂಡುತ್ತಿದ್ದಾರೆ. ತಮ್ಮ ಪಾಲೊವರ್ಸ್ ಗಳನ್ನು ಹೆಚ್ಚಿಸುವ ಸಲುವಾಗಿ ದಂಪತಿಗಳಿಬ್ಬರು ಮಾಡಿದ ಕುತಂತ್ರ ಇದೀಗ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ.

ಹೌದು ಪಾಕಿ ಮಹಿಳೆಯೊಬ್ಬಳು ತನ್ನ ಗಂಡನ ಸಾವಿನ ನಕಲಿ ಟಿಕೆಟ್‌ಲಾಕ್ ವೀಡಿಯೊವನ್ನು ಮಾಡಿ ಅದನ್ನು ತನ್ನ ಖಾತೆಗೆ ಅಪ್‌ಲೋಡ್ ಮಾಡಿದ್ದಾಳೆ. ಆಕೆಯ ಉದ್ದೇಶ ಪಾಲೊವರ್ಸ್ ಹೆಚ್ಚಿಸುವುದಾಗಿತ್ತು. ಆದರೆ ಆಗಿದ್ದು ಮಾತ್ರ ಉಲ್ಟಾ, ಪತಿಯ ಸಾವಿನ ವಿಚಾರವನ್ನು ತಿಳಿದು ಜನರು ಸಹಾನುಭೂತಿ ತೋರಿಸಲು ಮಹಿಳೆಯ ಮನೆಗೆ ಹೋಗಿದ್ದಾರೆ. ನಂತರ ಸತ್ಯ ಬಹಿರಂಗವಾಗಿದೆ. ಮಹಿಳೆಯ ಪತಿ ಆದಿಲ್ ರಾಜ್ ಪೂತ್ ಗೆ ಟಿಕ್ ಟಾಕ್ ನಲ್ಲಿ 26 ಲಕ್ಷ ಪಾಲೊವರ್ಸ್ ಗಳಿದ್ದಾರೆ. ಆದಿಲ್ ರಜಪೂತ್ ಅವರ ಸಾವಿನ ಸುದ್ದಿ ಕೇಳಿ ಮಂಗಳವಾರ ಅಭಿಮಾನಿಗಳು ಬಹಳ ಆಶ್ಚರ್ಯಚಕಿತರಾಗಿದ್ದಾರೆ. ಪತ್ನಿ ಆದಿಲ್ ರಜಪೂತ್ ಅವರ ಟಿಕ್ಟಾಕ್ ಖಾತೆಯಿಂದಲೇ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸಂಬಂಧಿಕರು ಮತ್ತು ಅಭಿಮಾನಿಗಳು ಮನೆಗೆ ತಲುಪಿದಾಗ ಸತ್ಯ ಬಹಿರಂಗವಾಯಿತು. ಈಗ ಜನರು ಆದಿಲ್ ರಜಪೂತ್ ಅವರ ಪತ್ನಿ ಫರಾಹ್ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸುತ್ತಿದ್ದಾರೆ.

Leave a Reply