ಬಾಲಿವುಡ್ ನಟರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರೆ, ದಕ್ಷಿಣದ ನಟ ನಟಿಯರು ಹಲವು ರೀತಿಯ ಅಭಿಮಾನಿಗಳನ್ನು ಹೊಂದಿದ್ದಾರೆ. ನೆಚ್ಚಿನ ನಟ ನಟಿಯರ ಮೂರ್ತಿ ಮಾಡಿ ಪೂಜಿಸಿದವರೂ ಇದ್ದಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನನಟಿಯನ್ನು ಭೇಟಿ ಮಾಡಲಿಕ್ಕಾಗಿ 60 ಲಕ್ಷ ರೂ. ಕಳೆದು ಕೊಂಡಿದ್ದಾರೆ. ಕಾಜಲ್ ಅಗರ್ವಾಲ್ ಎಂಬ ನಟಿಯನ್ನು ಭೇಟಿ ಮಾಡಿ ಕೊಡಿಸುತ್ತೇವೆ ಎಂದು ಈ ವ್ಯಕ್ತಿಯನ್ನು ನಂಬಿಸಿ ಈತನಿಂದ ಲಕ್ಷಾಂತರ ಹಣ ಲಪಟಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ನಟಿಯನ್ನು ಭೇಟಿಯಾಗಲು ಅಭಿಮಾನಿಗಳಿಗೆ ಸಹಾಯ ಮಾಡುತ್ತಾರೆ ಎಂದು ಭರವಸೆ ನೀಡುವ ವೆಬ್‌ಪುಟದ ಬಲೆಗೆ ಈ ವ್ಯಕ್ತಿ ಬಿದ್ದರು. ಯುವಕ ಅವರ ಮಾತಿನ ಮರುಳಿಗೆ ಆಸಕ್ತಿ ತೋರಿಸಿದ. ಮೊದಲ ಹೆಜ್ಜೆಯಾಗಿ 50 ಸಾವಿರ ರೂಗಳನ್ನು ಪಾವತಿಸಿ ತನ್ನ ವೈಯಕ್ತಿಕ ವಿವರಗಳನ್ನು ಅವರಿಗೆ ಕೊಟ್ಟು ಬಿಟ್ಟ.

ಮುಂಬರುವ ತಿಂಗಳುಗಳಲ್ಲಿ, ವೆಬ್ಸೈಟ್ ನಡೆಸುತ್ತಿರುವ ದಂಧೆಕೋರರು ಕಾಜಲ್ ಅವರೊಂದಿಗಿನ ಸಭೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದೆ ಅವರಿಂದ ಹೆಚ್ಚಿನ ಹಣವನ್ನು ಲೂಟಿ ಮಾಡಿದರು. ಕೆಲವು ವಹಿವಾಟುಗಳ ನಂತರ, ಅಭಿಮಾನಿ ತನ್ನನ್ನು ಮೋಸಗೊಳಿಸಲಾಗಿದೆಯೆಂದು ಅರಿತುಕೊಂಡರೂ ಆತನಿಗೆ ಬೆದರಿಕೆ ಹಾಕಿ ಹಣ ಲೂಟಿ ಮಾಡಲು ತೊಡಗಿದರು. ಅವರ ಕೆಲವು ವೈಯಕ್ತಿಕ ಅನುಚಿತ ಫೋಟೋ ಪಡೆದು ಬ್ಲಾಕ್ ಮೇಲ್ ಮಾಡಿ ಸುಮಾರು ಅರುವತ್ತು ಲಕ್ಷ ಹಣ ಲೂಟಿ ಮಾಡಲಾಗಿದೆ.

ಕೊನೆಗೆ ಒತ್ತಡ ಸಹಿಸಲಾಗದೆ ಆತ ಮನೆ ಬಿಟ್ಟು ಓಡಿ ಹೋಗಿದ್ದು, ಪೊಲೀಸರು ಹುಡುಕಿದಾಗ ಕೊಲ್ಕೊತ್ತದಲ್ಲಿ ಆತನನ್ನು ಪತ್ತೆ ಹಚ್ಚಲಾಯಿತು. ಅಭಿಮಾನಿಯ ದೂರಿನ ಮೇರೆಗೆ ನಿರ್ಮಾಪಕರಾದ ಸರವಣಕುಮಾರ್ ರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

Leave a Reply