ಹೇಳಿ-ಕೇಳಿ ಬದುಕು ಕಷ್ಟಕಾರ್ಪಣ್ಯಗಳ ಮರುಭೂಮಿ. ಹೀಗಿರುವಾಗ ನಾವು ಭಾರತದಲ್ಲಿ ಹುಟ್ಟಿ ಬದುಕುತ್ತಿರುವುದು ನಮ್ಮ ಭಾಗ್ಯವೆನ್ನಬಹುದು. ಭೂಮಿಯನ್ನು ತಾಯಿಯಾಗಿ ಕಾಣುವ ಈ ದೇಶದಲ್ಲಿ ಹೆಣ್ಣಿಗಿರುವ ಪ್ರಾಮುಕ್ಯತೆಯು ಆಕಾಶದಲ್ಲಿ ಹೂಳೆಯುವ ನಕ್ಷತ್ರದಂತೆ ನಿಖರವಾಗಿ ಕಾಣುತ್ತಿದೆ. ಆದರೆ ಇವೆಲ್ಲದರ ನಡುವೆ “ಹೆಣ್ಣು ಮಗುವಿನ ಜನನವಾಯಿತಲ್ಲಾ” ಎಂದು ದುಃಖಿಸುವವರು ಈಗಲೂ ನಮ್ಮೊಡನೆ ಇದ್ದಾರೆ ಎಂದರೆ ನಾವು ನಂಬಲೇಬೇಕು.
ಹಿರಿಯರ ನುಡಿಯಂತೆ ಒಂದು ಸೃಜನಶೀಲ ಮಗುವಿನ ಹಿಂದೆ ತಾಯಿಯ ಶ್ರಮ, ಒಂದು ಯಶಸ್ವಿ ಪುರುಷನ ಹಿಂದೆ ಮಡದಿಯ ಪಾತ್ರ ಹಾಗು ಒಂದು ಹೆಸರಾಂತ ತಂದೆಯ ಹಿಂದೆ ಮಗಳ ಶ್ರಮ, ತ್ಯಾಗ, ಸಹನೆ ಹೀಗೆ ಸಾಲು ಸಾಲು, ಇದರ ಪ್ರತಿಫಲವೇ ಕುಟುಂಬ. ಹೆಣ್ಣಿಗೆ ಗೌರವ ಹೆಚ್ಚಾದಂತೆ ಜವಾಬ್ದಾರಿಗಳು ಹೆಚ್ಚುತ್ತದೆ ಇದು ಪ್ರಕೃತಿ ನಿಯಮ ಹಾಗೆಯೆ ಹೆಣ್ಣು ತನ್ನ ಜೀವನದಲ್ಲಿ ಬಹುಮುಖ್ಯವಾಗಿ ನಿರ್ವಹಿಸುವ ಜವಾಬ್ದಾರಿಯೆಂದರೆ ತಂದೆ ತಾಯಿಗೆ ಮಗಳಾಗಿ, ಗಂಡನಿಗೆ ಹೆಂಡತಿಯಾಗಿ ಹಾಗು ತನ್ನ ಮಕ್ಕಳಿಗೆ ತಾಯಿಯಾಗಿ. ಹೀಗೆ ನಾನ ರೂಪದಲ್ಲಿ ಜವಾಬ್ದಾರಿಯನ್ನು ನಿರ್ವಹಿಸುವಾಗ ಬರುವ ಪ್ರಶ್ನೆಯೆ ನಾನು ಬದುಕುವುದು ಯಾರಿಗಾಗಿ?
ಕುಟುಂಬದಲ್ಲಿ ಹೆಣ್ಣಿನ ಪಾತ್ರ ಎಷ್ಟು ಮುಖ್ಯವೋ ಗಂಡಿನ ಪಾತ್ರವು ಅಷ್ಟೇ ಮುಖ್ಯ. ಹೆಣ್ಣು ತನ್ನ ತಂದೆ ತಾಯಿಗೆ ಮಗಳಾಗಿ ನಿರ್ವಹಿಸುವ ಜವಾಬ್ದಾರಿಗಿಂತ ಗಂಡು ತನ್ನ ತಂದೆ ತಾಯಿಗೆ ಮಗನಾಗಿ ನಿರ್ವಹಿಸಲು ಇರುವ ಜವಾಬ್ದಾರಿಗಳು ಹೆಚ್ಚು. ಹೆಣ್ಣು ತನ್ನ ತಂದೆ ತಾಯಿಗೆ ಗೌರವದ ಪ್ರತೀಕವಾದರೆ ಗಂಡು ತನ್ನ ತಂದೆ ತಾಯಿಗೆ ಗೌರವದ ಪ್ರತೀಕದ ಜೊತೆ ಜೊತೆಗೆ ಜೀವನದ ಆಧಾರ. ಹೀಗೆ ಜವಾಬ್ದಾರಿಯನ್ನು ಹೊತ್ತ ಮಗ ತನ್ನ ಜವಾಬ್ದಾರಿಯನ್ನು ಮರೆತು ಬಿಟ್ಟರೆ ಕಡೆಗೆ ಮಗಳಿಗೆ ಕಾಡುವ ಪ್ರಶ್ನೆಯೇ ನಾನು ಬದುಕುವುದು ಯಾರಿಗಾಗಿ?.
ಹೆಣ್ಣಿಗೆ ಇರುವ ಕಷ್ಟಕರವಾದ ಜವಾಬ್ದಾರಿ ಎಂದರೆ ಮಗಳಾಗಿ ನಿರ್ವಹಿಸುವ ಕರ್ತವ್ಯ. ಯಾಕೆ ಗೊತ್ತಾ? ಹೆಣ್ಣು ಮೊದಲಿಗೆ ಮಗಳಾಗಿ ಜನಿಸಿದರೂ ತದನಂತರದಲ್ಲಿ ಕಾಲ ಕಳೆದ ಹಾಗೆ ತನ್ನನ್ನರಸಿ ಬಂದವರಿಗೆ ಸಂಗತಿಯಾಗಿ, ಮಕ್ಕಳಿಗೆ ತಾಯಿಯಾಗಿ ತನ್ನ ಜವಾಬ್ದಾರಿ ನಿಭಾಯಿಸುತ್ತಾ ಜೊತೆಯಲ್ಲಿ ಮುಂದುವರೆಯುತ್ತ ಹೇೂಗುತ್ತಾ ಅವಳಿಗೆ ಮತ್ತೆ ಮಗಳಾಗಿ ಹಿಂದೆ ತಿರುಗಿ ನೊಡುವಷ್ಷು ಸಮಯ ತಾಳ್ಮೆ ಇರಲ್ಲ. ಈ ಪರಿಸ್ಥಿತಿಯೇ ಕಾಡುವುದವಳಿಗೆ ನಾನು ಬದುಕುವುದು ಯಾರಿಗಾಗಿ?
ಗಂಡು ಮಕ್ಕಳು ಸರಿ ಇಲ್ಲದವರ ಮನೆಯಲ್ಲಿ ಕೊನೆಗೆ ತಂದೆ ತಾಯಿಯನ್ನು ನೊಡಿಕೂಳ್ಳುವ ಜವಾಬ್ದಾರಿ ಪುನಃ ಮಗಳಿಗೆ ಬರುತ್ತೆ. ಆದರೆ ಅವಳು ಈಗಾಗಲೆ ಇನ್ನೂಬ್ಬರ ಮನೆಯ ಸೊಸೆ ಆಗಿರುತ್ತಾಳೆ ಅವರು ತಮ್ಮ ಸೊಸೆ ತವರು ಮನೆಯ ಜವಾಬ್ದಾರಿಯನ್ನು ತೆಗೆದುಕೂಳ್ಳುವುದನ್ನು ಒಪ್ಪುವುದಿಲ್ಲ ಇಂತಹ ಸಂದರ್ಭದಲ್ಲಿ ಅವಳಿಗೆ ತವರು ಮನೆಯ ಕಡೆ ನೊಡುವುದೇ ಅಥವಾ ಗಂಡನ ಮನೆಯಲ್ಲೆ ಇರುವುದೇ ಎಂಬ ಸಮಸ್ಯೆ ಭೀಕರವಾಗಿ ಕಾಡುತ್ತದೆ. ಈ ಸಂಧರ್ಭದಲ್ಲಿ ಅವರ ಮನಸ್ಸಿನಲ್ಲಿ ಕೊರೆಯುವುದು ನಾನು ಬದುಕುವುದು ಯಾರಿಗಾಗಿ ?
ಅಂತಿಮವಾಗಿ ನಾನು ಹೇಳ ಬಯಸುವುದೇನೆಂದರೆ ದಯವಿಟ್ಟು ಗಂಡು ಮಕ್ಕಳ್ಳೆಲ್ಲರು ತಮಗೆ ಇರುವ ಜವಾಬ್ದಾರಿಯನ್ನು ಅರಿತು ಹೆತ್ತವರಿಗೆ ಒಂದೊಳ್ಳೆಯ ಮಗನಾಗಿ ತಂದೆ-ತಾಯಿಯನ್ನು ನೊಡಿಕೊಂಡರೆ ತಾನು ಬದುಕುವುದು ಯಾರಿಗಾಗಿ ಎಂದು ನಿರಂತರವಾಗಿ ಕೊರೆಯುತ್ತಿರುವ ಈ ಪ್ರಶ್ನೆಗಳು ತಾನಾಗಿಯೆ ಮರೆಯಾಗುತ್ತವೆ.
ಲೇಖಕರು: ಆಯೀಷಾ ಬೇಗಂ ಕೊಪ್ಪ