ಆಹಾರ ತಯಾರಿಸುವ ವ್ಯಕ್ತಿಯೊಬ್ಬ ಶೌಚಾಲಯದ ನೀರನ್ನು ಚಟ್ನಿ ಮಾಡಲು ಉಪಯೋಗಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಂಚಲನ ಮೂಡಿಸಿದೆ.
ಕುರಿತು ಆಹಾರ ಮತ್ತು ಔಷಧ ಆಡಳಿತ(ಎಫ್‍ಡಿಎ) ತನಿಖೆಆರಂಭಿಸಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಇಂತಹ ನೀರನ್ನು ಉಪಯೋಗಿಸಬಾರದು ಎಂದು ಎಫ್‍ಡಿಎ ಎಚ್ಚರಿಕೆ ನೀಡಿದೆ.
ವಿಡಿಯೋದಲ್ಲಿ ಇರುವ ವ್ಯಕ್ತಿ ಸಿಕ್ಕಿದರೆ ಲೈಸೆನ್ಸ್ ಪರಿಶೀಲಿಸುತ್ತೇವೆ. ಸ್ಯಾಂಪಲ್ ವಶಕ್ಕೆ ಪಡೆದು , ಅದನ್ನು ಪರಿಶೀಲಿಸಿದ ಬಳಿಕ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಈ ವಿಡಿಯೋ ಎಲ್ಲಿದ್ದು ಮತ್ತು ಯಾವಾಗ ಚಿತ್ರೀಕರಿಸಿದ್ದು ಪರಿಶೀಲಿಸುತ್ತಿದ್ದೇವೆ ಎಂದು ಮುಂಬೈ ಬ್ರ್ಯಾಂಚ್‍ನ ಎಫ್‍ಡಿಎ ಅಧಿಕಾರಿ ಶೈಲೇಶ್ ಅದಾವ್ ಹೇಳಿದ್ದಾರೆ.

Leave a Reply